ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನವೀಕೃತವಾಗಿಸಲು ಭಾರತೀಯ ಚುನಾವಣಾ ಆಯೋಗ (ECI) ವಿಶೇಷ ತೀವ್ರ ಪರಿಷ್ಕರಣೆ-2026 (SIR 2026) ಪ್ರಕ್ರಿಯೆ ಆರಂಭಿಸಿದೆ. ಇದರ ಭಾಗವಾಗಿ ಮತದಾರರು ಈಗ ಮನೆ ಬಿಟ್ಟು ಹೊರಗೆ ಹೋಗದೆ, ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ SIR ಗಣತಿ ನಮೂನೆಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಆನ್ಲೈನ್ನಲ್ಲಿ SIR ನಮೂನೆ ಸಲ್ಲಿಸುವುದು ಹೇಗೆ?
1. ಪೋರ್ಟಲ್ ಅಥವಾ ECINET ಆ್ಯಪ್ ಬಳಸಿ ಮೊದಲು ಚುನಾವಣಾ ಆಯೋಗದ Voters’ Service Portal ಅಥವಾ ECINET ಮೊಬೈಲ್ ಆ್ಯಪ್ ತೆರೆಯಿರಿ. ಹೊಸ ಬಳಕೆದಾರರಾಗಿದ್ದರೆ ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಂಡು, ನಂತರ ಲಾಗಿನ್ ಆಗಿ.
2. ‘Fill Census Form’ ಆಯ್ಕೆ ಮಾಡಿ ಲಾಗಿನ್ ಆದ ಬಳಿಕ ಡ್ಯಾಶ್ಬೋರ್ಡ್ನಲ್ಲಿ ಕಾಣುವ ‘Fill Census Form’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, EPIC (ವೋಟರ್ ಐಡಿ) ಸಂಖ್ಯೆ ನಮೂದಿಸಿ.
3. OTP ಮೂಲಕ ದೃಢೀಕರಣ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿದ ಬಳಿಕ, ನಿಮ್ಮ ಮಾಹಿತಿಯು ಮೊದಲೇ ಭರ್ತಿಯಾಗಿರುವ (Pre-filled) ಫಾರ್ಮ್ ತೆರೆದುಕೊಳ್ಳುತ್ತದೆ.
4. ವಿವರಗಳನ್ನು ಪರಿಶೀಲಿಸಿ ಹೆಸರು, ವಿಳಾಸ, EPIC ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅಗತ್ಯವಿದ್ದರೆ ತಿದ್ದುಪಡಿ ಮಾಡಿ.
5. ಆಧಾರ್ e-Sign ಮೂಲಕ ಸಲ್ಲಿಸಿ ಮಾಹಿತಿ ಸರಿಯಾಗಿದ್ದರೆ ಆಧಾರ್ ಆಧಾರಿತ e-Sign ಮೂಲಕ ನಮೂನೆಯನ್ನು ದೃಢೀಕರಿಸಿ ಸಲ್ಲಿಸಬಹುದು.
ಸಲ್ಲಿಕೆಯ ನಂತರ ಏನು ಮಾಡಬೇಕು?
ಫಾರ್ಮ್ ಯಶಸ್ವಿಯಾಗಿ ಸಲ್ಲಿಸಿದ ಬಳಿಕ Acknowledgement Receipt ಲಭ್ಯವಾಗುತ್ತದೆ. ಇದನ್ನು PDF ರೂಪದಲ್ಲಿ ಡೌನ್ಲೋಡ್ ಮಾಡಿ ಸುರಕ್ಷಿತವಾಗಿ ಉಳಿಸಿಕೊಳ್ಳಿ. ನಂತರ ಪರಿಶೀಲನೆಗಾಗಿ ನಿಮ್ಮ ಮನೆಗೆ ಬರುವ BLO (Booth Level Officer) ಅವರಿಗೆ ಈ ಸ್ವೀಕೃತಿ ಪತ್ರವನ್ನು ತೋರಿಸಬೇಕಾಗುತ್ತದೆ.
ತಾಂತ್ರಿಕ ಸಮಸ್ಯೆಯಾದರೆ?
ಸರ್ವರ್ ಸಮಸ್ಯೆ ಅಥವಾ ಇತರ ತಾಂತ್ರಿಕ ಕಾರಣಗಳಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಮನೆಗೆ ಭೇಟಿ ನೀಡುವ BLO ಅವರಿಂದ ಭೌತಿಕ ನಮೂನೆ ಪಡೆದು, ಅದನ್ನು ಭರ್ತಿ ಮಾಡಿ ಅವರಿಗೆ ಸಲ್ಲಿಸಬಹುದು.
ಗಮನಿಸಿ
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಾಗಿ ಉಳಿಯಲು ಮತ್ತು ಯಾವುದೇ ತೊಂದರೆ ಉಂಟಾಗದಂತೆ, ಚುನಾವಣಾ ಆಯೋಗ ನಿಗದಿಪಡಿಸಿರುವ ಅವಧಿಯೊಳಗೆ SIR 2026 ಗಣತಿ ನಮೂನೆಯನ್ನು ಕಡ್ಡಾಯವಾಗಿ ಸಲ್ಲಿಸುವುದು ಸೂಕ್ತ.