Gruhalakshmi And Annbhagya Yojane Update: ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್!ಪೆಂಡಿಂಗ್ ಹಣ ಬಿಡುಗಡೆ ಕುರಿತು ಹೊಸ ಅಪ್ಡೇಟ್!

ನಮಸ್ಕಾರ ಗೆಳೆಯರೇ,
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಕುರಿತು ಫಲಾನುಭವಿಗಳು ನಿರಂತರವಾಗಿ ಮಾಹಿತಿ ಹುಡುಕುತ್ತಲೇ ಇದ್ದಾರೆ. ವಿಶೇಷವಾಗಿ ಕೆಲ ತಿಂಗಳ ಹಣ ಇನ್ನೂ ಜಮಾ ಆಗದಿರುವುದರಿಂದ ಹಲವಾರು ಮಹಿಳೆಯರು ಮತ್ತು ಕುಟುಂಬಗಳು ಗೊಂದಲದಲ್ಲಿದ್ದಾರೆ.

Gruhalakshmi And Annbhagya Yojane Update

ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರದಿಂದ ಹೊರಬಿದ್ದಿರುವ ಹೊಸ ಅಪ್ಡೇಟ್‌ಗಳು ಸಾರ್ವಜನಿಕರಿಗೆ ಸ್ಪಷ್ಟತೆ ನೀಡುವಂತಿವೆ. ಪೆಂಡಿಂಗ್ ಹಣ ಬಿಡುಗಡೆ, ಮುಂದಿನ ಕಂತುಗಳ ಸ್ಥಿತಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ–ಅಕ್ಕಿ ವಿತರಣೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆ 25ನೇ ಕಂತಿನ ಹಣ ಬಿಡುಗಡೆ ಪ್ರಾರಂಭ!

ಗೃಹಲಕ್ಷ್ಮಿ ಯೋಜನೆ ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಹಾಗೂ ಪರಿಣಾಮಕಾರಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳಾ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2,000 ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.ಈಗಾಗಲೇ ಮಹಿಳೆಯರು 24 ಕಂತುಗಳ ಹಣ ಪಡೆದುಕೊಂಡಿದ್ದಾರೆ. ಒಟ್ಟು ₹48,000 ನೇರ ಸಹಾಯ ದೊರೆತಿದೆ.

ಇದೀಗ ಮಹಿಳೆಯರು ಬಹಳ ದಿನಗಳಿಂದ ಕಾಯುತ್ತಿದ್ದ 25ನೇ ಕಂತಿನ ಹಣ ಬಿಡುಗಡೆ ಕುರಿತು ದೊಡ್ಡ ಅಪ್ಡೇಟ್ ಹೊರಬಿದ್ದಿದೆ.

ಹಣ ಜಮಾ ಆಗಿರುವ ಜಿಲ್ಲೆಗಳು

ಈ ಜಿಲ್ಲೆಗಳ ಬಹುತೇಕ ಫಲಾನುಭವಿಗಳ ಖಾತೆಗೆ ಈಗಾಗಲೇ ಹಣ ಜಮಾ ಆಗಿದೆ. ಇನ್ನುಳಿದ ಜಿಲ್ಲೆಗಳ ಮಹಿಳೆಯರಿಗೂ ಮುಂದಿನ 5 ರಿಂದ 6 ದಿನಗಳ ಒಳಗಾಗಿ ಹಣ ವರ್ಗಾವಣೆ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಒಂದು ವೇಳೆ ಹಣ ಜಮಾ ಆಗದೇ ಇದ್ದರೂ ಆತಂಕ ಪಡುವ ಅಗತ್ಯವಿಲ್ಲ. ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದೆ.

ಅನ್ನಭಾಗ್ಯ ಯೋಜನೆ: ಹಣವೋ ಅಕ್ಕಿಯೋ? 

ಅನ್ನಭಾಗ್ಯ ಯೋಜನೆಯು ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಮಹತ್ವದ ಯೋಜನೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವ ಗುರಿ ಸರ್ಕಾರದದ್ದಾಗಿದೆ.

ಹಣ ವರ್ಗಾವಣೆ ಯಾಕೆ ಮಾಡಲಾಗುತ್ತಿತ್ತು?

ಆದರೆ ಈ ಹಣ ಕೆಲವು ಫಲಾನುಭವಿಗಳಿಗೆ 2–3 ಕಂತುಗಳು ಜಮಾ ಆಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ವಿಧಾನಸಭೆಯಲ್ಲಿ ಚರ್ಚೆ – ಆಹಾರ ಸಚಿವರ ಸ್ಪಷ್ಟನೆ

ಈ ವಿಷಯವನ್ನು ಶಾಸಕರಾದ ಮಹೇಶ್ ತೆಂಗಿನಕಾಯಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕ, ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಆದರೆ, ಹಿಂದಿನ ಅವಧಿಯಲ್ಲಿ ಹಣ ಜಮಾ ಆಗದೇ ಉಳಿದ ಫಲಾನುಭವಿಗಳಿಗೆ ಪೆಂಡಿಂಗ್ ಹಣವನ್ನು ಶೀಘ್ರದಲ್ಲೇ ಜಮಾ ಮಾಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *