PM Mudra Loan: ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

PM Mudra Loan: ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಈಗ ಭಾರತದ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳನ್ನು ಆರ್ಥಿಕವಾಗಿ ಬಲಪಡಿಸುವಲ್ಲಿ ಎಂದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ 2015ರಲ್ಲಿ ಆರಂಭ ಮಾಡಿದಂತಹ ಈ ಒಂದು ಯೋಜನೆ ಈಗ ಸಣ್ಣ ವ್ಯಾಪಾರಸ್ಥರು ಮಹಿಳಾ ಉದ್ಯಮಿಗಳು ಮತ್ತು ಮೊದಲ ಬಾರಿಗೆ ವ್ಯಾಪಾರ ಮಾಡುವವರಿಗೆ 20 ಲಕ್ಷದವರೆಗೆ ಈಗ ಸಾಲವನ್ನು ನೀಡುತ್ತಾ ಇದೆ.

PM Mudra Loan

ಇದು ಈಗ ಸೂಕ್ಷ್ಮ ಘಟಕಗಳ ಅಭಿವೃದ್ಧಿ ಮತ್ತು ಪುನರ್ ಹಣಕಾಸು ಸಂಸ್ಥೆಯ ಮೂಲಕ ಈಗ ಜಾರಿಗೆ ಮಾಡಲಾಗಿದ್ದು. ಕರ್ನಾಟಕದಲ್ಲಿ ಈ ಒಂದು ಯೋಜನೆ ಅಡಿಯಲ್ಲಿ ಈಗಾಗಲೇ 3 ಲಕ್ಷ ಕೋಟಿ ಸಾಲ ವಿತರಣೆಯಾಗಿದ್ದು. ಈಗ ನಮ್ಮ ರಾಷ್ಟ್ರೀಯ ಮಟ್ಟದಲ್ಲಿ ಈಗ 37 ಲಕ್ಷ ಕೋಟಿ ಕೂಡ ಈ ಒಂದು ಯೋಜನೆ ಹಣ ಈಗ ಮೀರಿದೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು ಕೂಡ ಸಾಲವನ್ನು ಪಡೆಯುವುದು ಹೇಗೆ ಮತ್ತು ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಈ ಒಂದು ಮುದ್ರಾ ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಮುದ್ರಾ ಯೋಜನೆಯ ಮುಖ್ಯ ಉದ್ದೇಶವು ಏನೆಂದರೆ ಈಗ ಕೃಷಿಯೇತರ ಸಣ್ಣ ಉದ್ಯಮಗಳಿಗೆ ಸುಲಭವಾಗಿ ಹಣಕಾಸು ಒದಗಿಸುವುದು ಮತ್ತು NSS ಸಮೀಕ್ಷೆಯ ಪ್ರಕಾರ ಈಗ ನಮ್ಮ ದೇಶದ ಅತಿ ಹೆಚ್ಚು ಸಣ್ಣ ವ್ಯಾಪಾರಗಳು SC/ST  ಮತ್ತು ಒಬಿಸಿ ಸಮುದಾಯ ಗಳಿಗೆ ಸೇರಿವೆ. ಹಾಗೆ ಇವುಗಳು ಈಗ ಉಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ದೂರವಿರುವುದರಿಂದ ಅನೌಪಚಾರಿಕ ಮೂಲಗಳಿಂದ ಹೆಚ್ಚಿನ ಬಡ್ಡಿಯಲ್ಲಿ ಸಾಲವನ್ನು ಪಡೆಯುತ್ತವೆ. ಈ ಒಂದು ಸಮಸ್ಯೆಯನ್ನು ಈಗ ನಿವಾರಿಸಲು ಈ ಒಂದು ಮುದ್ರಾ ಯೋಜನೆ ಸಹಾಯವನ್ನು ಈಗ ಬಿಡುಗಡೆ ಮಾಡಲಾಗಿದೆ.

ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಸಣ್ಣ ಉದ್ಯಮಗಳಿಗೆ ಬಂಡವಾಳವನ್ನು ಒದಗಿಸುವುದು ಹಾಗೂ ಮಹಿಳಾ ಉದ್ಯಮಶೀಲತೆಯನ್ನು ಬೆಂಬಲಿಸುವುದು ಬ್ಯಾಂಕಿನ ಸೌಲಭ್ಯ ಇಲ್ಲದವರಿಗೆ ಸುಲಭ ಹಣಕಾಸು ಮತ್ತು ಮೊದಲ ತಲೆಮಾರಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಅರ್ಹತೆಗಳು ಏನು?

  • ಈಗ ಕೃಷಿಯ ತರ ಆದಾಯ ಉತ್ಪಾದಿಸುವ ವ್ಯಾಪಾರ ಮತ್ತು ಉತ್ಪಾದನೆ ಅಥವಾ ಸೇವಾ ಚಟುವಟಿಕೆಗಳು ಈಗ ಸಾಲವನ್ನು ಪಡೆಯಬಹುದು.
  • ಹಾಗೆ ಆ ಒಂದು ಸಾಲ ಪಡೆಯುವ ಅಭ್ಯರ್ಥಿಗಳು ಈಗ ಬ್ಯಾಂಕಿಗೆ ಸುಸ್ತಿ ಸಾಲಗಾರನ್ನು ಆಗಿರಬಾರದು.
  • ಆನಂತರ ಸಾಲ ಪಡೆಯುವ ಅಭ್ಯರ್ಥಿ ಉತ್ತಮ ಕ್ರೆಡಿಟ್ ಸ್ಕೋರ್  ಅನ್ನು ಹೊಂದಿರಬೇಕಾಗುತ್ತದೆ.
  • ಹಾಗೆ ಅಭ್ಯರ್ಥಿಯು ಭಾರತದ ಖಾಯಂ ನಿವಾಸಿ ಆಗಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿಳಾಸದ ಪ್ರಮಾಣ ಪತ್ರ
  • ವ್ಯಾಪಾರ ಪರವಾನಿಗೆ ಪ್ರಮಾಣ ಪತ್ರ
  • ಕಳೆದ ಆರು ತಿಂಗಳ ಬ್ಯಾಂಕ್ ಖಾತೆಗೆ ವಿವರ
  • ಪಾಸ್ಪೋರ್ಟ್ ಅಳತೆಯ  ಭಾವಚಿತ್ರ ಮೊಬೈಲ್

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನಾವು ಈ ಕೆಳಗೆ ನೀಡಿರುವಂಥ ಉದ್ಯಮ ಮಿತ್ರ ಪೋರ್ಟಲ್ ಗೆ ನೀವು ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ತದನಂತರ ನೀವು ಹೊಸ ಅಥವಾ ಅಸ್ತಿತ್ವದಲ್ಲಿರುವ ಉದ್ಯಮಿಯಾಗಿ ನೋಂದಣಿ ಮಾಡಿದ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ನಮೂದಿಸಿ ಒಟಿಪಿ ಮೂಲಕ ಪರಿಶೀಲನೆಯನ್ನು ಮಾಡಿಕೊಳ್ಳಬೇಕು..
  • ಆನಂತರ ವೈಯಕ್ತಿಕ ಮಾಹಿತಿಗಳನ್ನು ಅದರಲ್ಲಿ ನೀವು ಭರ್ತಿ ಮಾಡಿಕೊಳ್ಳಬೇಕು.
  • ಆನಂತರ ನಿಮಗೆ ಬೇಕಾಗುವ ಸಾಲದ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನಿಮ್ಮ ಹಣಕಾಸು ಸಾಲಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ನಿಮ್ಮ ಕೆಲವೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ಆನಂತರ ನೀವು ಭರ್ತಿ ಮಾಡಿರುವ ಪ್ರತಿಯೊಂದು ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಕೂಡ ಈ ಒಂದು ಲೋನ್ ಪಡೆಯಬಹುದು.

Leave a Comment