SSP Scholarship Applying Start: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು? ಇಲ್ಲಿದೆ ಮಾಹಿತಿ.
ಈಗ ಹಿಂದುಳಿದ ವರ್ಗದವರು ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳು ಮತ್ತು ಪ್ರತಿಭಾವಂತ ಯುವಕರಿಗೆ ಒಂದು ಒಳ್ಳೆಯ ವಿದ್ಯಾರ್ಥಿ ವೇತನ ಎಂದು ಹೇಳಬಹುದು. ಈಗ ಎಲ್ಲರೂ ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ವಿದ್ಯಾರ್ಥಿ ವೇತನದ ಮೂಲಕ 15,000 ವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈಗ ಯಾರೆಲ್ಲ ಅತ್ಯಂತ ಕಡು ಬಡವರಿದ್ದಾರೆ ಅಂತ ಅವರ ಮಕ್ಕಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ. ಈ ವಿದ್ಯಾರ್ಥಿ ವೇತನದ ಮೂಲಕ ಹಣವನ್ನು ಪಡೆದುಕೊಂಡು ತಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗುತ್ತದೆ. ಈಗ ಈ ಒಂದು ವಿದ್ಯಾರ್ಥಿ ವೇತನದ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
SSP ವಿದ್ಯಾರ್ಥಿ ವೇತನದ ಮಾಹಿತಿ
ಈಗ ಕರ್ನಾಟಕ ಸರ್ಕಾರವು ಶಿಕ್ಷಣವನ್ನು ಎಲ್ಲರಿಗೂ ಲಭ್ಯಗಳಿಸುವ ಗುರಿಯೊಂದಿಗೆ ಈಗ ಸ್ಥಾಪನೆ ಮಾಡಿರುವಂತಹ ಈ ಒಂದು ಆನ್ಲೈನ್ ವೇದಿಕೆಯ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳೆಸುವಂತಹ ಒಂದು ಬಲಿಷ್ಠ ಸಾಧನೆವಾಗಿರುತ್ತದೆ. ಹಾಗೆ SC/ST, OBC, ಅಲ್ಪಸಂಖ್ಯಾತ, ಬ್ರಾಹ್ಮಣ, ವಿಕಲಚೇತನರು ಮತ್ತು ಇತರ ವರ್ಗಗಳ ವಿದ್ಯಾರ್ಥಿಗಳಿಗೆ ಇದೊಂದು ಆರ್ಥಿಕವಾಗಿ ಸಹಾಯವನ್ನು ಮಾಡುತ್ತದೆ.
ಹಾಗೆ ಮೆಟ್ರಿಕ್ ಮೊದಲು ಮತ್ತು ಮೆಟ್ರಿಕ್ ನಂತರದ ಎರಡು ಹಂತಗಳಲ್ಲೂ ಕೂಡ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ವರ್ಷಕ್ಕೆ ಗರಿಷ್ಠವಾಗಿ 15 ಸಾವಿರದಷ್ಟು ವಿದ್ಯಾರ್ಥಿ ವೇತನವನ್ನು ಈಗ ನೀವು ಪಡೆದುಕೊಳ್ಳಬಹುದು.
ಯಾರೆಲ್ಲ ಅರ್ಹರು?
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- SC.ST ಮತ್ತು ಒಬಿಸಿ ಅಲ್ಪಸಂಖ್ಯಾತ ಗ್ರಾಮೀಣ ಅಭಿವೃದ್ಧಿ ಮಂಡಳಿ ವಿಕರಚೇತನರ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಪ್ರತಿಯೊಬ್ಬರು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
- ಹಾಗೆ ಕುಟುಂಬದ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಹಾಗೆ ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಹಿಂದಿನ ವರ್ಷದ ಶೈಕ್ಷಣಿಕ ಪತ್ರಗಳು
- ಶಾಲಾ ದಾಖಲಾತಿ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ.
- Link : Apply Now
- ಆನಂತರ ಅದರಲ್ಲಿ ನೀವು ರಿಜಿಸ್ಟ್ರೇಷನ್ ನ ಮೇಲೆ ಕ್ಲಿಕ್ ಮಾಡಿ ಆಧಾರ ಮೊಬೈಲ್ ನಂಬರ್ ಮತ್ತು ಇಮೇಲ್ ಬಳಸಿ ಓಟಿಪಿ ದೃಢೀಕರಣ ಮಾಡಿ ಲಾಗಿನ್ ಆಗಬೇಕಾಗುತ್ತದೆ..
- ಆನಂತರ ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಶೈಕ್ಷಣಿಕ ಮಾಹಿತಿಗಳನ್ನು ಅದರಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅದರಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
- ಆನಂತರ ನೀವು ನೀಡಿರುವಂತಹ ದಾಖಲೆಗಳು ಸರಿಯಾಗಿದ್ದರೆ ಸಮ್ಮೇರ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಹಾಗೆ ಈಗ ನೀವು ಕೂಡ ಅರ್ಜಿ ಸಲ್ಲಿಸಲು ನಿಮಗೆ ಮೊಬೈಲಲ್ಲಿ ಬಾರದೇ ಇದ್ದರೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್ 2025 ಕೊನೆಯ ದಿನಾಂಕವಾಗಿದೆ.