New Ration Card Applying Update News: ರಾಜ್ಯದಲ್ಲಿ ಈಗ ಹೊಸ ರೇಷನ್ ಕಾರ್ಡ್ ವಿತರಣೆ! ರಾಜ್ಯ ಸರ್ಕಾರ ಹೇಳಿರುವುದು ಏನು?
ಈಗ ನಮ್ಮ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ಜನರಲ್ಲಿ ಕುತೂಹಲ ಮತ್ತು ನಿರೀಕ್ಷೆ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕಳೆದ ಕೆಲವು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗಳಲ್ಲಿ ವಿತರಣೆ ವಿಳಂಬವಾಗಿದ್ದು. ಈಗ ಸರಕಾರದಿಂದ ಕೆಲವೊಂದಷ್ಟು ಪ್ರಮುಖ ನಿರ್ಧಾರಗಳು ಮತ್ತು ಅಪ್ಡೇಟ್ಗಳು ಬಂದಿವೆ.

ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಅರ್ಜಿ ಪ್ರಕ್ರಿಯೆ ಹಾಗೂ ವಿತರಣೆ ಸ್ಥಿತಿ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಈಗ ಈ ಒಂದು ಲೇಖನದಲ್ಲಿ ನೀಡಲಾಗಿದೆ.
BPL ರೇಷನ್ ಕಾರ್ಡ್
ಈಗ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಎನ್ನುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವಂತ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯಲು ಇದು ಸಹಾಯ ಮಾಡುವ ಪ್ರಮುಖ ದಾಖಲೆಯಾಗಿದೆ. ಇದರ ಜೊತೆಗೆ ಈಗ ಸರ್ಕಾರದ ವಿವಿಧ ಯೋಜನೆಗಳಾದಂತಹ ವೃದ್ಯಾಪ ವೇತನ ಆರೋಗ್ಯ ಯೋಜನೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತ ಸೌಲಭ್ಯಗಳಿಗೆ ಈ ಒಂದು ರೇಷನ್ ಕಾರ್ಡ್ ಅಗತ್ಯವಾಗಿದೆ.
ಆದರೆ ಸ್ನೇಹಿತರು ಈಗ ನಿಮಗೆ ತಿಳಿದಿರುವಂತೆ ಕಳೆದ ಎರಡು ವರ್ಷಗಳಿಂದ ಈ ಒಂದು ಹೊಸ ರೇಷನ್ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗಿರುವುದರಿಂದ ಈಗ ಸಾವಿರಾರು ಕುಟುಂಬಗಳು ತೊಂದರೆಯನ್ನು ಎದುರಿಸುತ್ತ ಇವೆ. ಆದರೆ ಸರ್ಕಾರ ಅಂತವರಿಗೆ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ರಾಜ್ಯದಲ್ಲಿ ರೇಷನ್ ಕಾರ್ಡ್ ಸಂಖ್ಯೆ ಮತ್ತು ಸ್ಥಿತಿ ಏನು?
ಈಗ ವಿಧಾನಸಭೆ ಇತ್ತೀಚಿನ ಅಧಿವೇಶನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ ಅವರು ನಮ್ಮ ರಾಜ್ಯದಲ್ಲಿ ಸುಮಾರು 1.28 ಕೋಟಿ BPL ರೇಷನ್ ಕಾರ್ಡ್ ಗಳಿವೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಇದೀಗ ನಮ್ಮ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಹೊಸ ರೇಷನ್ ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯಾದಂತಹ ಗಮನ ಪ್ರಗತಿಯಾಗಿಲ್ಲ. ಈಗ ಕೂಡು ಕುಟುಂಬದಿಂದ ಬೇರ್ಪಟ್ಟ ಕುಟುಂಬಗಳು ಹೊಸದಾಗಿ ಮದುವೆಯಾದ ದಂಪತಿಗಳು ಮತ್ತು ಆರ್ಥಿಕವಾಗಿ ಹಿಂದುಳಿದವರು ರೇಷನ್ ಕಾರ್ಡ್ ಗಾಗಿ ಕಾದು ಕುಳಿತಿದ್ದಾರೆ.
ಈ ಕಾರ್ಡ್ ವಿತರಣೆಯಲ್ಲಿ ವಿಳಂಬಕ್ಕೆ ಕಾರಣ ಏನು?
ಈಗ ರಾಜ್ಯ ಸರ್ಕಾರದ ಪ್ರಕಾರ ಅನರ್ಹ ಬಿಪಿಎಲ್ ಕಾರ್ಡ್ಗಳ ಪರೀಕ್ಷೆಯೇ ಹೊಸ ಕಾರ್ಡ್ ವಿತರಣೆ ಗಳ ಬಗ್ಗೆ ಮುಖ್ಯ ಕಾರಣವಾಗಿದೆ ಈಗ ಕೆಲವೊಂದಷ್ಟು ವ್ಯಕ್ತಿಗಳು ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಇದರಿಂದಾಗಿ ನಮ್ಮ ಸರ್ಕಾರದ ಆರ್ಥಿಕ ಬಾರ ಹೆಚ್ಚಾಗುತ್ತದೆ. ಈ ಒಂದು ಅನರ್ಹ ಕಾರ್ಡ್ ಗಳನ್ನು ಗುರುತಿಸಿ ಅವುಗಳನ್ನು ರದ್ದುಗೊಳಿಸಿ ಅರ್ಹರಿಗೆ ಮಾತ್ರ ಕಾರ್ಡ್ ಗಳನ್ನು ನೀಡುವ ಪ್ರಕ್ರಿಯೆಗೆ ಸರಕಾರ ತೊಡಗಿದೆ.
ಬಾಕಿ ಉಳಿದಿರುವ ಅರ್ಜಿಗಳು ಎಷ್ಟು?
ಈಗ ನಮ್ಮ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಈಗಾಗಲೇ ಬಾಕಿ ಇದೆ. ಕೆಲವೊಂದು ಕುಟುಂಬಗಳು ಕಳೆದ ಎರಡು ವರ್ಷಗಳಿಂದ ತಮ್ಮ ರೇಷನ್ ಕಾರ್ಡ್ ಆಗಿ ಕಾಯುತ್ತಾ ಕುಳಿತಿದ್ದಾರೆ. ಈಗ ಈ ಒಂದು ವಿಳಂಬದಿಂದಾಗಿ ಸರ್ಕಾರದ ಸಬ್ಸಿಡಿ ಯೋಜನೆಗಳಿಂದ ವಂಚಿತರಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗ ಆಹಾರ ಇಲಾಖೆಯ ಅಧಿಕಾರಿಗಳು ಪರೀಕ್ಷೆಯ ಕಾರ್ಯ ಮುಗಿದ ತಕ್ಷಣ ಹಂತ ಹಂತವಾಗಿ ಹೊಸ ರೇಷನ್ ಕಾರ್ಡ್ಗಳನ್ನು ವಿತರಿಸಲಾಗುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ.