Infosys Foundation Scholarship For Girls Students: ವಿದ್ಯಾರ್ಥಿನಿಯರಿಗೆ 1 ಲಕ್ಷ ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ನಮ್ಮ ರಾಜ್ಯದಲ್ಲಿರುವಂತಹ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಅರ್ಜಿ ಸಲ್ಲಿಕೆಗಳು ಈಗ ಪ್ರಾರಂಭ ಮಾಡಿದೆ. ಈಗ ನಮ್ಮ ದೇಶದಲ್ಲಿರುವಂತ ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಶನ್ ನ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಆರ್ಥಿಕ ಬೆಂಬಲವನ್ನು ನೀಡುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು ಈಗ ಬಿಡುಗಡೆ ಮಾಡಲಾಗಿದೆ. ಈಗ ಈ ಒಂದು ಕಾರ್ಯಕ್ರಮದಲ್ಲಿ ನೀವು ಕೂಡ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಿ.

ಈಗ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳನ್ನು ಒಳಗೊಂಡಂತಹ ಪದವಿಪೂರ್ವ ಕೋರ್ಸ್ ಗಳನ್ನು ಮುಂದುವರಿಸಲು ಬಯಸುವ ಪ್ರತಿಯೊಬ್ಬ ಮಹಿಳಾ ವಿದ್ಯಾರ್ಥಿಗಳು ಕೂಡ ಈ ಒಂದು ಸಹಾಯಧನವನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?
Stem ಈ ಕೋರ್ಸ್ನ ಅವಧಿಗೆ ವಿದ್ಯಾರ್ಥಿಗಳಿಗೆ 1 ಲಕ್ಷದವರೆಗಿನ ಸಂಪೂರ್ಣ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ. ಈಗ ಈ ಒಂದು ಹಣವು ಆ ಕೋರ್ಸ್ ನ ಅವಧಿಗೆ ಅಧ್ಯಯನ ಸಾಮಗ್ರಿಗಳು ಹಾಗೂ ಹಾಸ್ಟೆಲ್ ವೆಚ್ಚವಾಗಿ ಈ ಒಂದು ಮೊತ್ತವನ್ನು ವಿದ್ಯಾರ್ಥಿಯನ್ನು ಬಳಕೆ ಮಾಡಿಕೊಳ್ಳಬಹುದು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ವಿದ್ಯಾರ್ಥಿನಿ ಆಗಿರಬೇಕು.
- ಆನಂತರ ಒಂದು ವಿದ್ಯಾರ್ಥಿನಿಯು 12ನೇ ತರಗತಿಯನ್ನು ಪೂರ್ಣಗೊಳಿಸಬೇಕು.
- ಆನಂತರ ವಿದ್ಯಾರ್ಥಿಗಳು ಮಾನ್ಯತೆ ಪಡೆದಿರುವಂತಹ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪದವಿಪೂರ್ವ ಕೋರ್ಸ್ ಗಳಲ್ಲಿ ದಾಖಲಾಗಿರಬೇಕು.
- ಎರಡನೇ ವರ್ಷದಲ್ಲಿ ಪದವಿಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
- ಹಾಗೆಯೇ ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಗುರುತಿನ ಚೀಟಿ
- ಬ್ಯಾಂಕ್ ಖಾತೆಯ ವಿವರ
- ಆರು ತಿಂಗಳ ವಿದ್ಯುತ್ ಬಿಲ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣ ಪತ್ರಗಳು
- ಇತ್ತೀಚಿನ ಭಾವಚಿತ್ರ
- ಪ್ರವೇಶ ಪಡೆದ ಪುರಾವೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅದರಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ಎಂಟರ್ ಮಾಡುವುದರ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು.
ಆನಂತರ ನೀವು ಲಾಗಿನ್ ಆದ ನಂತರ ಇನ್ಫೋಸಿಸ್ ಫೌಂಡೇಶನ್ ಸ್ಕಾಲರ್ಶಿಪ್ ಒಪ್ಶನ್ ಗೆ ಹೋಗಿ ಅಲ್ಲಿ ಕ್ಲಿಕ್ ಮಾಡಬೇಕಾಗುತ್ತದೆ.
ಆನಂತರ ಅದರಲ್ಲಿ ಬರುವಂತಹ ಒಂದು ಅರ್ಜಿ ಫಾರ್ಮ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ನೀವು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು.
ಆನಂತರ ಅದರಲ್ಲಿ ಕೇಳುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ನೀವು ಅಪ್ಲೋಡ್ ಮಾಡಿಕೊಂಡು ನಂತರ ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದ್ದರೆ ಸಮ್ಮಿಟ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30 10 2025