Gruhalakshmi Scheme Update News: ಗೃಹಲಕ್ಷ್ಮಿ ಯೋಜನೆ 2,000 ಹಣ ಯಾವಾಗ ಬಿಡುಗಡೆ! ಎಷ್ಟು ಕಂತು ಜಮಾ! ಇಲ್ಲಿದೆ ಮಾಹಿತಿ.
ಈಗ ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದಂತ ಈ ಒಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈಗ ಈ ಒಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈಗ ಮತ್ತೊಂದು ಸಿಹಿ ಸುದ್ದಿ ಒಂದು ಕಾದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಗಸ್ಟ್ ತಿಂಗಳ 2,000 ಹಣವನ್ನು ಈಗ ದೀಪಾವಳಿಗೂ ಮುಂಚಿತವಾಗಿಯೇ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಘೋಷಣೆಯನ್ನು ಮಾಡಿದ್ದಾರೆ.

ಈ ಒಂದು ಯೋಜನೆ ಈಗ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಈಗ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಮಹಿಳೆಯರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು.
ಬಾಕಿ ಇರುವ ಕಂತುಗಳ ಮಾಹಿತಿ
ಈಗ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್ 2025 ಕ್ಕೆ ಎರಡು ವರ್ಷಗಳನ್ನು ಪೂರೈಸಿದೆ. ಅಷ್ಟೇ ಅಲ್ಲದೆ ಈವರೆಗೆ ಜುಲೈ ತಿಂಗಳಿನವರೆಗಿನ 23 ಕಂತುಗಳ 2,000 ಮತ್ತು ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ಜಮಾ ಆಗಿದೆ. ಇದರಿಂದ ಈಗ ಒಬ್ಬ ಫಲಾನುಭವಿಗಳಿಗೆ ಸುಮಾರು 46,000 ಹಣವು ಸಂದಾಯವಾಗಬೇಕಿತ್ತು. ಆಗಸ್ಟ್ ತಿಂಗಳ ಕಂತು ಜಮಾ ಆದರೆ ಈಗ ಒಟ್ಟಾರೆ 24 ಕಂತುಗಳು ಅಂದರೆ ಎರಡು ವರ್ಷಗಳ ಪೂರ್ಣ ಆರ್ಥಿಕ ಸಹಾಯವೂ ಫಲಾನುಭವಿಗಳಿಗೆ ದೊರೆಯುತ್ತದೆ.
ಹಾಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಕಂತುಗಳ ಹಣ ಇನ್ನೂ ಬಿಡುಗಡೆ ಆಗಬೇಕಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಕಾರ ಸಪ್ಟೆಂಬರ್ ಕಂತಿನ ಹಣವನ್ನು ಅಕ್ಟೋಬರ್ ಅಂತ್ಯದೊಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ ಮಾಡುವ ಚರ್ಚೆಗಳು ನಡೆಯುತ್ತಿವೆ.
ಹಾಗೆ ಈಗ ಕೆಲವೊಂದಷ್ಟು ಜಿಲ್ಲೆಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಆ ಒಂದು ಹಣವು ಬಿಡುಗಡೆಯಲ್ಲಿ ವಿಳಂಬವಾಗಿದೆ ಎಂದು ಈಗ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಹಾಗೆ ಬಾಕಿ ಇರುವಂತ ಕಂತುಗಳನ್ನು ಒಟ್ಟಿಗೆ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ.
ಸಚಿವರಿಂದ ಮಾಹಿತಿ ಏನು?
ಈಗ ಗೃಹಲಕ್ಷ್ಮೀ ಯೋಜನೆಯ ಸುದ್ದಿಯ ಜೊತೆಗೆ ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚಿನ ಚಟುವಟಿಕೆ ಕೂಡ ಸಾರ್ವಜನಿಕರ ಗಮನವನ್ನು ಸೆಳೆದಿದೆ. ಈಗ ಹಾಸನಾಂಭ ದೇವಾಲಯದ ದರ್ಶನ ಉತ್ಸವದಲ್ಲಿ ಭಾಗವಹಿಸಿದಂತ ಅವರು ಸಾಮಾನ್ಯ ರಂತೆ ಒಂದು ಸಾವಿರ ಟಿಕೆಟ್ ಖರೀದಿಸಿ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ.
ಹಾಗೆ ಈಗ ಗೃಹಲಕ್ಷ್ಮೀ ಯೋಜನೆ ಜೊತೆಗೆ ಶಕ್ತಿ ಯೋಜನೆಯು ಕೂಡ ರಾಜ್ಯದ ಮಹಿಳೆಯರಿಗೆ ಸ್ವಾವಲಂಬನೆಯನ್ನು ಒದಗಿಸಿದೆ. ಈ ಒಂದು ಯೋಜನೆಗಳು ಜನರ ಬದುಕನ್ನು ಸುಧಾರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಶಕ್ತಿ ಅನ್ನು ಒದಗಿಸಿದೆ.