Gruhalakshmi Scheme Amount Jama: ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ! ಹಣ ಬರದಿದ್ದರೆ ಈ ಕೆಲಸ ಮಾಡಿ.
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಈಗಾಗಲೇ ನಮ್ಮ ಕರ್ನಾಟಕದ 1.27 ಕೋಟಿ ಮಹಿಳಾ ಫಲಾನುಭವಿಗಳ ಗೃಹಲಕ್ಷ್ಮಿ ಯೋಜನೆ ಬಾಕಿ ಕಂತುಗಳು ಈಗ ಪ್ರತಿಯೊಬ್ಬರ ಖಾತೆಗಳಿಗೆ ಬಿಡುಗಡೆಯಾಗಿದೆ. ಅದೇ ರೀತಿಯಾಗಿ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದಂತ ಲಕ್ಷ್ಮಿ ಹೆಬ್ಬಾಳಕರವರು ದೇವನಹಳ್ಳಿ ಕಾರ್ಯಕ್ರಮದಲ್ಲಿ ನೀಡಿದಂತಹ ಭರವಸೆಯಂತೆ ಈಗ ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣವನ್ನು ಜಮಾ ಮಾಡೋ ಪ್ರಕ್ರಿಯೆಯನ್ನು ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಆಗಸ್ಟ್ ಮತ್ತು ಅಕ್ಟೋಬರ್ ಕಂತುಗಳು ಈಗ 4000 ಹಣವನ್ನು ಕೂಡ ಡಿಸೆಂಬರ್ ಮೊದಲ ವಾರದೊಳಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಮಾಹಿತಿಗಳನ್ನು ನೀಡುತ್ತಾ ಇದ್ದಾರೆ. ಅಷ್ಟೇ ಅಲ್ಲದೆ ಈಗ ಇದರ ಜೊತೆಗೆ ನವೆಂಬರ್ 28 ರಂದು ಬೆಂಗಳೂರಿನಲ್ಲಿ ನಡೆದಂತಹ ಐಸಿಡಿಎಸ್ ಸುವರ್ಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಸಚಿ ಲಕ್ಷ್ಮಿ ಹೆಬ್ಬಾಳಕಾರವರು ಗೃಹಲಕ್ಷ್ಮಿ ಬ್ಯಾಂಕ್ ಮತ್ತು ಅಕ್ಕಪಡೆಯೋಜನೆಗಳಿಗೆ ಈಗ ಚಾಲನೆಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗಾಗಲೇ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಈಗ ನವೆಂಬರ್ 28 ರಂದು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಆಗಿದ್ದು. ಇನ್ನು ಕೆಲವೇ ದಿನಗಳಲ್ಲಿ ಈ ಒಂದು 23ನೇ ಕಂತಿನ ಹಣ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತದೆ. ಹಾಗೆ ಈಗ ನೀವು ನಿಮ್ಮ ಖಾತೆಯನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಈ ನವೆಂಬರ್ 28ರಂದು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪಿದೆ.
ಅದೇ ರೀತಿಯಾಗಿ ಈಗ ಈ ಹಿಂದೆ ಪೆಂಡಿಂಗ್ ಇರುವಂತಹ 21 22ನೇ ಕಂತಿನ ಹಣಗಳನ್ನು ಕೂಡ ಈಗ ಡಿಸೆಂಬರ್ ಮೊದಲ ವಾರದಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಡಿಸೆಂಬರ್ ಮೊದಲ ವಾರ ಅಥವಾ ಡಿಸೆಂಬರ್ ಅಂತ್ಯದೊಳಗಾಗಿ ಈ ಒಂದು ಬಾಕಿ ಇರುವಂತ ಪ್ರತಿಯೊಂದು ಕಂತಿನ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಒಂದು ವೇಳೆ ಸ್ನೇಹಿತರೆ ಈ ಒಂದು ಹಣವು ನಿಮ್ಮ ಖಾತೆಗೆ ಜಮಾ ಆಗದೆ ಇದ್ದರೆ ಈಗ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ನೀವು ಸರಿಯಾದ ರೀತಿಯಲ್ಲಿ ಪಾಲಿಸಿ ಆಗ ಮಾತ್ರ ನಿಮಗೆ ಈ ಒಂದು ಗೃಹಲಕ್ಷ್ಮಿ ಯೋಜನಾ ಹಣವು ಬಂದು ಜಮಾ ಆಗುತ್ತದೆ.
ಹಣ ಬರದೆ ಇದ್ದರೆ ಈ ಕೆಲಸ ಕಡ್ಡಾಯ!
- ಈಗ ನಿಮ್ಮ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ NPCI ಮ್ಯಾಪಿಂಗ್ ಮತ್ತು ಕೆವೈಸಿ ಪೂರ್ಣಗೊಳಿಸಬೇಕು.
- ಆನಂತರ ನೀವು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮತ್ತು EKYC ಅನ್ನು ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮಾಡಿರಬೇಕು.
- ಆನಂತರ ನಿಮ್ಮ ಆಧಾರ್ ಕಾರ್ಡ್ ಏನಾದರೂ ಮಾಡಿಸಿಕೊಂಡು ಹತ್ತು ವರ್ಷ ಕಳೆದಿದ್ದರೆ ಅದರಲ್ಲಿ ನೀವು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.
ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಈಗ ನಿಮ್ಮ ಖಾತೆಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನಾ ನಾವು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ DBT ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಆ ಒಂದು ಅಪ್ಲಿಕೇಶನ್ ಗೆ ಲಾಗಿನ್ ಆಗಿ. ಆನಂತರ ನೀವು ಅದರಲ್ಲಿ ಇದುವರೆಗೂ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಆಗಿರುವ ಪ್ರತಿಯೊಂದು ಕಂತಿನ ಹಣದ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು.