Bhoo Odetana Scheme: ಬಡ ಮಹಿಳೆಯರಿಗೆ ಸ್ವಂತ ಜಮೀನು  ಖರೀದಿ ಮಾಡಲು ಸರ್ಕಾರದಿಂದ 12.5 ಲಕ್ಷ ಸಹಾಯಧನ!

Bhoo Odetana Scheme: ಬಡ ಮಹಿಳೆಯರಿಗೆ ಸ್ವಂತ ಜಮೀನು  ಖರೀದಿ ಮಾಡಲು ಸರ್ಕಾರದಿಂದ 12.5 ಲಕ್ಷ ಸಹಾಯಧನ!

ಸ್ವಂತ ಭೂಮಿ ಹೊಂದುವುದು ಅನೇಕ ಗ್ರಾಮೀಣ ಮಹಿಳೆಯರ  ಕನಸಾಗಿರುತ್ತದೆ. ಅಷ್ಟೇ ಅಲ್ಲದೆ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕನಸು ದೂರದ ಕನಸು ಆಗಿದೆ. ಈ ಹಿನ್ನೆಲೆಯಲ್ಲೇ ಕರ್ನಾಟಕ ಸರ್ಕಾರ ಆರಂಭಿಸಿರುವ ಈ ಒಂದು ಯೋಜನೆ  ಭೂ ಒಡೆತನ ಯೋಜನೆ ಬಡ ಮತ್ತು ಹಿಂದುಳಿದ ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಯೋಜನೆಯಾಗಿದೆ.

Bhoo Odetana Scheme

ಈ ಯೋಜನೆಯು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಕೃಷಿ ಭೂಮಿ ಖರೀದಿಸ ಮಾಡಲು ಸರ್ಕಾರ ನೆರವು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ಭೂ ಒಡೆತನ ಯೋಜನೆ ಮಾಹಿತಿ 

ಭೂ ಒಡೆತನ ಯೋಜನೆ 2018ರಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಗೊಂಡ ಮಹತ್ವದ ಸಾಮಾಜಿಕ ಕಲ್ಯಾಣ ಯೋಜನೆ. ಈಗ ಭೂರಹಿತ ಕುಟುಂಬಗಳ ಮಹಿಳೆಯರಿಗೆ ಕೃಷಿ ಭೂಮಿ ಖರೀದಿಸಲು ನೆರವು ನೀಡಿ, ಅವರನ್ನು ಕೃಷಿಯ ಮೂಲಕ ಸ್ಥಿರ ಆದಾಯ ಹೊಂದುವಂತೆ ಮಾಡುವುದೇ ಇದರ ಮೂಲ ಉದ್ದೇಶ.

ಈ ಯೋಜನೆಯ ವಿಶೇಷತೆ ಎಂದರೆ, ಭೂಮಿಯನ್ನು ಕಡ್ಡಾಯವಾಗಿ ಮಹಿಳೆಯರ ಹೆಸರಿನಲ್ಲಿ ನೋಂದಣಿ ಮಾಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಕೇವಲ ಆರ್ಥಿಕ ನೆರವಷ್ಟೇ ಅಲ್ಲದೆ, ಸಾಮಾಜಿಕ ಭದ್ರತೆಯನ್ನು ನೀಡಲಾಗುತ್ತದೆ.ಈಗಾಗಲೇ ಈ ಯೋಜನೆಮೂಲಕ 50,000ಕ್ಕೂ ಹೆಚ್ಚು ಮಹಿಳೆಯರು ಲಾಭ ಪಡೆದಿದ್ದಾರೆ.

ಯೋಜನೆಯ ಉದ್ದೇಶಗಳು

ಭೂ ಒಡೆತನ ಯೋಜನೆ ಹಲವು ಆಯಾಮಗಳಲ್ಲಿ ಮಹಿಳೆಯರ ಬದುಕನ್ನು ಬದಲಾಯಿಸುತ್ತದೆ. ಅದರ ಪ್ರಮುಖ ಉದ್ದೇಶಗಳು ಹೀಗಿವೆ

ಈಗ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸುವುದು ಹಾಗು ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವುದು. ಅಷ್ಟೇ ಅಲ್ಲದೆ ಗ್ರಾಮೀಣ ಬಡತನ ನಿರ್ಮೂಲನೆಗೆ ಸಹಕಾರ ನೀಡುವುದು ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವುದುಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸಹಾಯಧನದ ಮೊತ್ತ 

ಭೂ ಒಡೆತನ ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವು. ಅಷ್ಟೇ ಅಲ್ಲದೆ ಈ ಒಂದು ಯೋಜನೆ ಮೂಲಕ ಭೂಮಿಯನ್ನು ಖರೀದಿ ಮಾಡಲು ಗರಿಷ್ಠ 12.5 ಲಕ್ಷದವರೆಗೆ ಹಣವನ್ನು  ಪಡೆಯಬಹುದು. ಹಾಗೆ ಈ 75% ಸಬ್ಸಿಡಿ ಮತ್ತು ಇನ್ನುಳಿದ 25% ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಈ ಒಂದು ಹಣದಮೂಲಕ ಈಗ ನೀವು ಗರಿಷ್ಠ ಎರಡು ಎಕರೆವರೆಗೆ ಭೂಮಿಯನ್ನು ಖರೀದಿ ಮಾಡಬಹುದು.

ಅರ್ಹತೆ ಏನು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
  • ಮಹಿಳೆಯರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆಗಿರಬೇಕು.
  • ಭೂರಹಿತ ಮಹಿಳಾ ಕೃಷಿ ಕಾರ್ಮಿಕರು ಆಗಿರಬೇಕು.
  • ಹಾಗೆ ಅವರ ವಯಸ್ಸು 18 ರಿಂದ 55 ವರ್ಷ ಇರಬೇಕು.

ಯೋಜನೆಯನ್ನು ಅನುಷ್ಠಾನಗೊಳಿಸುವ ನಿಗಮಗಳು

ಭೂ ಒಡೆತನ ಯೋಜನೆಯನ್ನು ಕರ್ನಾಟಕ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಅವುಗಳು:

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ – ಪರಿಶಿಷ್ಟ ಜಾತಿಯ ಮಹಿಳೆಯರಿಗೆ

  • ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ – ಪರಿಶಿಷ್ಟ ಪಂಗಡದ ಮಹಿಳೆಯರಿಗೆ

  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ – ಭೋವಿ ಸಮುದಾಯದ ಮಹಿಳೆಯರಿಗೆ

  • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ – ನಿರ್ದಿಷ್ಟ ಹಿಂದುಳಿದ ಸಮುದಾಯಗಳಿಗೆ

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಪಾಸ್‌ಪೋರ್ಟ್ ಸೈಸ್

ಅರ್ಜಿ ಸಲ್ಲಿಸುವ ಹೇಗೆ?

  • ಈ ಯೋಜನೆ ಗೆ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹೊಸ ಬಳಕೆದಾರರಾಗಿ ನೋಂದಣಿ ಮಾಡಿ ಅಥವಾ ಲಾಗಿನ್ ಆಗಿ.
  • ಯೋಜನೆಯನ್ನು ಆಯ್ಕೆ ಮಾಡಿ ಅರ್ಜಿ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆ ನಡೆದು ಅನುಮೋದನೆಯಾದರೆ ಸಹಾಯಧನ ಮಂಜೂರಾಗುತ್ತದೆ.

Leave a Comment