Agriculture Loan For Farmers: ರೈತರಿಗೆ ಸಿಹಿ ಸುದ್ದಿ? ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ! ಅರ್ಜಿ ಸಲ್ಲಿಸುವುದು ಹೇಗೆ?

Agriculture Loan For Farmers: ರೈತರಿಗೆ ಸಿಹಿ ಸುದ್ದಿ? ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ! ಅರ್ಜಿ ಸಲ್ಲಿಸುವುದು ಹೇಗೆ?

ಈಗ ನಮ್ಮ ಭಾರತದ ಕೃಷಿ ಕ್ಷೇತ್ರವು ಆಧುನಿಕತೆಯ ಕಡೆಗೆ ವೇಗವಾಗಿ ಸಾಗುತ್ತಿದೆ. ಅಷ್ಟೇ ಅಲ್ಲದೆ ಆದರೆ ಈಗ ಗೋದಾಮು, ಕೋಲ್ಡ್ ಸ್ಟೋರೇಜ್, ಪ್ರಾಸೆಸಿಂಗ್ ಘಟಕಗಳು, ಸಾರಿಗೆ ಸೌಲಭ್ಯಗಳು ಸೌಕರ್ಯಗಳ ಕೊರತೆಯಿಂದಾಗಿ ರೈತರಿಗ ಕೊಯ್ಲು ನಂತರದಲ್ಲಿ ಶೇಕಡ 20 ರಿಂದ 30ರಷ್ಟು ಉತ್ಪನ್ನಗಳನ್ನು ಕಳೆದುಕೊಳ್ಳುತ್ತಾ ಇದ್ದಾರೆ.

Agriculture Loan For Farmers

ಈಗ ಈ ಒಂದು ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2020ರಲ್ಲಿ ಒಂದು ಲಕ್ಷ ಕೋಟಿ ವೆಚ್ಚದ ಕೃಷಿ ಮೂಲ ಸೌಕರ್ಯ ನಿಧಿ ಯೋಜನೆ ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆಯು ಕೂಡ 2025ರಲ್ಲಿ ತೀವ್ರ ಜನಪ್ರಿಯವಾಗಿದ್ದು. ರೈತರು ರೈತ ಗುಂಪುಗಳು ಮತ್ತು ಕೃಷಿ ಉದ್ದಿಮೆಗಳ ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲವನ್ನು ಈಗ ಪಡೆದುಕೊಳ್ಳುತ್ತಿದ್ದಾರೆ.

ಈ ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಯೋಜನೆ ಉದ್ದೇಶವೇನೆಂದರೆ ಕೊಯ್ಲು ನಂತರ ಆಗುವಂಥ ನಷ್ಟವನ್ನು ಕಡಿಮೆ ಮಾಡುವುದು. ಅಷ್ಟೇ ಅಲ್ಲದೆ ರೈತರ ಆದಾಯವನ್ನು ಹೆಚ್ಚಿಗೆ ಮಾಡುವುದು. ಅದೇ ರೀತಿಯಾಗಿ ಈಗ ಗ್ರಾಮೀಣ ಮಟ್ಟದಲ್ಲಿ ಆಧುನಿಕ ಮೂಲ ಸೌಕರ್ಯಗಳನ್ನು ನಿರ್ಮಿಸಲು, ಖಾಸಗಿ ಹೂಡಿಕೆಯನ್ನು ಈಗ ಆಕರ್ಷಿಸುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪ್ರಮುಖ ಲಾಭಗಳು ಏನು?

  • ಈಗ ಈ ಒಂದು ಯೋಜನೆಗೆ ಗರಿಷ್ಠ 2 ಕೋಟಿ ಹಣವನ್ನು ನೀಡಲಾಗುತ್ತದೆ.
  • ಅದೇ ರೀತಿಯಾಗಿ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಂಡರೆ ಗರಿಷ್ಠ 7 ವರ್ಷಗಳ  EMI ನ ಮೂಲಕ ಪಾವತಿ ಮಾಡಬಹುದು.
  • ಹಾಗೆ ನೀವು ಪಡೆದ ಸಾಲಕ್ಕೆ ಈಗ ಸರ್ಕಾರವೇ ಗ್ಯಾರಂಟಿ ಶುಲ್ಕವನ್ನು ನೀಡುತ್ತದೆ.
  • ಅದೇ ರೀತಿಯಾಗಿ ಸೌರಶಕ್ತಿ ಘಟಕಗಳೊಂದಿಗೆ ಈ ಒಂದು ನಿಧಿಯನ್ನು ಈಗ ನೀವು ಬಳಕೆ ಮಾಡಿಕೊಳ್ಳಬಹುದು.
  • ಅದೇ ರೀತಿಯಾಗಿ ಈ ಒಂದು ಸಾಲಕ್ಕೆ ಈಗ ವಾರ್ಷಿಕವಾಗಿ 3% ವರೆಗೆ ಬಡ್ಡಿದರವನ್ನು ನಿಗದಿ ಮಾಡಲಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಈಗ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆಯುವುದು ಯಾರ್ಯಾರೆಂದರೆ ವೈಯಕ್ತಿಕ ರೈತ ಉತ್ಪಾದಕ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಕೃಷಿ ಉದ್ದಿಮೆಗಳು, ಮಾರ್ಕೆಟಿಂಗ್ ಸಂಘಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪಿಪಿಪಿ ಮಾದರಿಯ ಯೋಜನೆಗಳು ಈ ಒಂದು ಯೋಜನೆ ಮೂಲಕ ಸಾಲ ಪಡೆಯಬಹುದು.

ಯಾವ ಯೋಜನೆಗಳಿಗೆ ಸಾಲ ದೊರೆಯುತ್ತದೆ

ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ಈ ಎಲ್ಲಾ ಉದ್ಯಮವನ್ನು ಮಾಡಲು ಈಗ ನೀವು ಸಾಲವನ್ನು ಪಡೆಯಬಹುದು.

  • ಕೋಲ್ಡ್ ಸ್ಟೋರೇಜ್ ಮತ್ತು ಕೋಲ್ಡ್ ಚೈನ್ ಸೌಲಭ್ಯಗಳು
  • ಗೋದಾಮುಗಳು
  • ಈ ಮಾರ್ಕೆಟಿಂಗ್ ಪ್ಲಾಟ್ಫಾರ್ಮ್ಗಳು
  • ಸಾವಯವ ಇನ್ಪುಟ್ ಉತ್ಪಾದನಾ ಘಟಕಗಳು
  • ಕಸ್ಟಮ ಹೈರಿಂಗ್ ಸೆಂಟರ್
  • ಸಾರಿಗೆ ವಾಹನಗಳು

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಭೂಮಿಯ ದಾಖಲೆಗಳು
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಈ ಒಂದು ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ನೀವು ಅದರಲ್ಲಿ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡನ್ನು ಬಳಸಿಕೊಂಡು ದೃಢೀಕರಣ ಅಂದರೆ ರೆಜಿಸ್ಟರ್ ಮಾಡಿಕೊಳ್ಳಿ.
  • ಆನಂತರ ನೀವು ಲಾಗಿನ್ ಆಗಿ ಅದರಲ್ಲಿ ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಅದಕ್ಕೆ ಬೇಕಾಗುವ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಆನಂತರ ನೀವು ಯಾವ ಬ್ಯಾಂಕ್ ಇಷ್ಟಪಡುತ್ತೀರೋ ಆ ಒಂದು ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ಆನಂತರ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ನೀವು ಯಾವ ಬ್ಯಾಂಕ್ ಅನ್ನು ಸಂಪರ್ಕ ಮಾಡಿರುತ್ತೀರೋ ಆ ಒಂದು ಬ್ಯಾಂಕ್ ನ ಮೂಲಕ ಸಿಬ್ಬಂದಿಗಳು ನಿಮ್ಮ ಕಡೆಗೆ ಬಂದು ತಪಾಸಣೆ ಮಾಡಿ ಸಾಲವನ್ನು ಮಂಜೂರಾತಿ ಮಾಡುತ್ತಾರೆ.

LINK : Apply Now 

Leave a Comment