Pm Swanidhi Yojane Update 2026: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ? ಬಡ್ಡಿ ಇಲ್ಲದೆ 30,000 ಸಾಲ! ಇಲ್ಲಿದೆ ನೋಡಿ ಮಾಹಿತಿ.

Pm Swanidhi Yojane Update 2026: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ? ಬಡ್ಡಿ ಇಲ್ಲದೆ 30,000 ಸಾಲ! ಇಲ್ಲಿದೆ ನೋಡಿ ಮಾಹಿತಿ.

ಇತ್ತೀಚೆಗೆ ದೇಶದ ಅಸಂಘಟಿತ ವಲಯದಲ್ಲಿ ದುಡಿಯುವ ಬಡವರು ಮತ್ತು ಬೀದಿ ಬದಿಯ ವ್ಯಾಪಾರಿಗಳ ಬದುಕಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇರಳದ ತಿರುವನಂತಪುರಂನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಜೊತೆಗೆ, ಬೀದಿ ವ್ಯಾಪಾರಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ‘PM SVANidhi Credit Card’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

Pm Swanidhi Yojane Update 2026

ಈ ಕಾರ್ಡ್ ಕೇವಲ ಹಣಕಾಸಿನ ನೆರವಿಗಷ್ಟೇ ಸೀಮಿತವಾಗಿಲ್ಲ. ತಂತ್ರಜ್ಞಾನದ ಸಹಾಯದಿಂದ ವ್ಯಾಪಾರಿಗಳ ದೈನಂದಿನ ವ್ಯವಹಾರವನ್ನು ಸುಲಭ, ಸುರಕ್ಷಿತ ಮತ್ತು ಡಿಜಿಟಲ್ ಆಗಿ ರೂಪಿಸುವ ಉದ್ದೇಶ ಇದಾಗಿದೆ. ಇದುವರೆಗೆ ಕ್ರೆಡಿಟ್ ಕಾರ್ಡ್ ಎಂಬುದು ದೊಡ್ಡ ಅಂಗಡಿಗಳಿಗಷ್ಟೇ ಸೀಮಿತವಾಗಿದ್ದರೆ, ಈಗ ಬೀದಿ ಬದಿಯ ವ್ಯಾಪಾರಿಗಳ ಕೈಗೂ ಅದು ತಲುಪಿದೆ.

PM ಸ್ವಾನಿಧಿ ಕ್ರೆಡಿಟ್ ಕಾರ್ಡ್ ಎಂದರೇನು?

‘ಸ್ವನಿಧಿ’ ಕ್ರೆಡಿಟ್ ಕಾರ್ಡ್ ಒಂದು ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯ. ಅಂದರೆ, ಒಮ್ಮೆ ನೀಡಲಾದ ಕ್ರೆಡಿಟ್ ಮಿತಿಯೊಳಗೆ ಹಣವನ್ನು ಬಳಸಿ, ಮರುಪಾವತಿ ಮಾಡಿದ ನಂತರ ಮತ್ತೆ ಅದೇ ಮಿತಿಯೊಳಗೆ ಹಣ ಬಳಸುವ ಅವಕಾಶ ಈ ಕಾರ್ಡ್ ನೀಡುತ್ತದೆ. ವ್ಯಾಪಾರಿಗಳಿಗೆ ದಿನನಿತ್ಯದ ಸರಕು ಖರೀದಿ, ಕಚ್ಚಾ ವಸ್ತುಗಳ ವ್ಯವಸ್ಥೆ, ತುರ್ತು ಖರ್ಚುಗಳಿಗೆ ಇದು ತುಂಬಾ ಸಹಾಯಕವಾಗಲಿದೆ.

ಈ ಕಾರ್ಡ್‌ನ ಪ್ರಮುಖ ವಿಶೇಷತೆಗಳು

PM SVANidhi ಕ್ರೆಡಿಟ್ ಕಾರ್ಡ್ ಅನ್ನು ಇತರ ಸಾಲ ಯೋಜನೆಗಳಿಂದ ವಿಭಿನ್ನವಾಗಿಸುವ ಕೆಲವು ಮುಖ್ಯ ಅಂಶಗಳಿವೆ:

  • UPI ಲಿಂಕ್ ಸೌಲಭ್ಯ:
    ಈ ಕಾರ್ಡ್ ಅನ್ನು ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಯಾವುದೇ UPI ಅಪ್ಲಿಕೇಶನ್‌ಗೆ ಲಿಂಕ್ ಮಾಡಬಹುದು. ಬ್ಯಾಂಕ್‌ಗೆ ಹೋಗದೇ, ಮೊಬೈಲ್ ಮೂಲಕವೇ ವ್ಯವಹಾರ ನಡೆಸಲು ಸಾಧ್ಯ.
  • ಬಡ್ಡಿರಹಿತ ಪ್ರಯೋಜನ:
    ನಿಗದಿತ ಅವಧಿಯೊಳಗೆ ಹಣವನ್ನು ಮರುಪಾವತಿ ಮಾಡಿದರೆ, ವ್ಯಾಪಾರಿಗಳಿಗೆ ಬಡ್ಡಿ ಕಟ್ಟುವ ಅಗತ್ಯವಿಲ್ಲ. ಇದು ಸಣ್ಣ ವ್ಯಾಪಾರಿಗಳಿಗೆ ದೊಡ್ಡ ರಿಲೀಫ್.
  • ಡಿಜಿಟಲ್ ಕ್ಯಾಶ್‌ಬ್ಯಾಕ್:
    ಕಾರ್ಡ್ ಬಳಸಿ ಡಿಜಿಟಲ್ ಪಾವತಿ ಮಾಡಿದವರಿಗೆ ತಿಂಗಳಿಗೆ ₹100 ವರೆಗೆ, ವರ್ಷಕ್ಕೆ ಒಟ್ಟು ₹1,200 ಕ್ಯಾಶ್‌ಬ್ಯಾಕ್ ಸಿಗುವ ವ್ಯವಸ್ಥೆ ಇದೆ.

ಎಷ್ಟು ಹಣ ದೊರೆಯುತ್ತದೆ

ಈ ಕ್ರೆಡಿಟ್ ಕಾರ್ಡ್‌ನ ಹಣಕಾಸಿನ ಮಿತಿಯು ಹಂತ ಹಂತವಾಗಿ ಹೆಚ್ಚುವಂತೆ ರೂಪಿಸಲಾಗಿದೆ:

  • ಆರಂಭಿಕ ಮಿತಿ: ₹10,000
  • ಉತ್ತಮ ಮರುಪಾವತಿಗೆ ಬಹುಮಾನ: ಸರಿಯಾಗಿ ಹಣ ಬಳಸಿ ಸಮಯಕ್ಕೆ ಮರುಪಾವತಿ ಮಾಡಿದರೆ, ಕ್ರೆಡಿಟ್ ಮಿತಿಯನ್ನು ₹30,000 ವರೆಗೆ ಹೆಚ್ಚಿಸಬಹುದು.
  • ಮಾನ್ಯತೆ: ಕಾರ್ಡ್ ಒಮ್ಮೆ ಪಡೆದರೆ 5 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ.

ಯಾರೆಲ್ಲ ಈ ಕಾರ್ಡ್ ಪಡೆಯಬಹುದು? 

ಈ ಸೌಲಭ್ಯ ಎಲ್ಲರಿಗೂ ತಕ್ಷಣ ಲಭ್ಯವಿಲ್ಲ. ಕೆಲವು ಅರ್ಹತಾ ನಿಯಮಗಳನ್ನು ಪೂರೈಸಬೇಕು:

  • ಈಗಾಗಲೇ PM SVANidhi ಯೋಜನೆಯಡಿ ಸಾಲ ಪಡೆದಿರಬೇಕು
  • ಮೊದಲ ಎರಡು ಹಂತದ ಸಾಲಗಳನ್ನು (₹10,000 ಮತ್ತು ₹20,000) ಯಶಸ್ವಿಯಾಗಿ ಮರುಪಾವತಿ ಮಾಡಿರಬೇಕು
  • ಡಿಜಿಟಲ್ ವಹಿವಾಟು ನಡೆಸುವ ಮನಸ್ಸು ಮತ್ತು ಸಾಮರ್ಥ್ಯ ಇರಬೇಕು

ಅರ್ಹ ವ್ಯಾಪಾರಿಗಳಿಗೆ ಬ್ಯಾಂಕ್‌ಗಳ ಮೂಲಕ ಈ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವ್ಯಾಪಾರಿಗಳು ಕೆಳಗಿನ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಬಹುದು. ಈಗ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರ (CSC) ಕ್ಕೆ ಭೇಟಿ ನೀಡಿ ಅಲ್ಲಿಯೂ ಅರ್ಜಿ ಸಲ್ಲಿಸಬಹುದು.

Leave a Comment