Gas Dealership Start: ಗ್ಯಾಸ್ ಏಜೆನ್ಸಿ ಪ್ರಾರಂಭಿಸಲು ಅರ್ಜಿ ಸಲ್ಲಿಕೆಗಳು ಪ್ರಾರಂಭ! ಈ ಕೂಡಲೇ ಮಾಹಿತಿ ತಿಳಿಯಿರಿ.
ಈಗ ನಮ್ಮ ದೇಶದಲ್ಲಿ ಮನೆ ಮನೆಗಳಲ್ಲಿ ಈಗ ಎಲ್‌ಪಿಜಿ ಗ್ಯಾಸ್ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಾ ಇದೆ. ಅಷ್ಟೇ ಅಲ್ಲದೆ ಈಗ ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದಾಗಿ 2014ರಲ್ಲಿ ಈಗ 14 ಕೋಟಿ ಕನೆಕ್ಷನ್ಗಳು ಇದ್ದವು. ಆದರೆ ಈಗ 2025 ರಲ್ಲಿ 33 ಕೋಟಿಗಿಂತ ಹೆಚ್ಚಿನ ಗ್ಯಾಸ್ ಕನೆಕ್ಷನ್ ಗಳನ್ನು ಈಗಾಗಲೇ ಜನರು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಗ್ಯಾಸ್ ಏಜೆನ್ಸಿ ಒಂದು ದೊಡ್ಡ ಮಾರುಕಟ್ಟೆಯನ್ನು ನಿರ್ಮಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಇದು ಈಗ ಸ್ಥಿರ ಆದಾಯದ ಮೂಲವಾಗಿ ಈಗ ಚಿಕ್ಕ ಹೂಡಿಕೆಯಿಂದ ಉದ್ಯೋಗ ಸೃಷ್ಟಿಸುವಂತಹ ಅವಕಾಶವನ್ನು ಕೂಡ ನೀಡುತ್ತದೆ. ಅದೇ ರೀತಿಯಾಗಿ ಈಗ ಡಿಸೆಂಬರ್ 4 2025 ರಿಂದ IOCL BPCL ಮತ್ತು HPCL ಕಂಪನಿಗಳು ಹೊಸ ಡೀಲರ್ಶಿಪ್ ಗಳಿಗೆ ಅರ್ಜಿಗಳನ್ನು ಪ್ರಾರಂಭ ಮಾಡಿದ್ದು. ಈಗ ಈ ಒಂದು ಡೀಲರ್ ಶಿಪ್ಗಳನ್ನು ಪಡೆದುಕೊಂಡು ನೀವು ಪ್ರತಿ ತಿಂಗಳು 50 ಸಾವಿರದಿಂದ 5 ಲಕ್ಷದವರೆಗೆ ಈಗ ಆದಾಯವನ್ನು ಮಾಡಿಕೊಳ್ಳಬಹುದು. ಈಗ ನೀವು ಕೂಡ ಈಗ ಈ ಒಂದು ಉತ್ತಮವಾದಂತ ಆದಾಯವನ್ನು ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈ ಕೂಡಲೇ ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಅರ್ಹತೆಗಳು ಏನು? ಬೇಕಾಗುವ ದಾಖಲೆಗಳು ಏನು ಹಾಗೂ ಅರ್ಜಿಯನ್ನು ಸಲ್ಲಿಸುವುದು ಯಾವ ರೀತಿ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ಗ್ಯಾಸ್ ಏಜೆನ್ಸಿಯ ಮಹತ್ವ
ಈಗ ನಮ್ಮ ಭಾರತದಲ್ಲಿ ಎಲ್‌ಪಿಜಿ ಬಳಕೆ ಹತ್ತು ವರ್ಷಗಳಲ್ಲಿ ಡಬಲ್ ಆಗುವುದು ಹಾಗೆ ಈಗ PMUY ಯಿಂದ 10 ಕೋಟಿ ಮಹಿಳಾ ಕನೆಕ್ಷನ್ಗಳು ಸೇರಿದಂತೆ ಈಗ ನಮ್ಮ ದೇಶದಲ್ಲಿ 33 ಕೋಟಿ ಕನೆಕ್ಷನ್ ಗಳು ಈಗಾಗಲೇ ಇವೆ. ಅಷ್ಟೇ ಅಲ್ಲದೆ ದಿನಕ್ಕೆ 2 ಲಕ್ಷಕ್ಕಿಂತ ಹೆಚ್ಚು ಸಿಲಿಂಡರ್ ಗಳು ಈಗಾಗಲೇ ವಿತರಣೆಯಾಗುತ್ತ ಇದೆ. ಹಾಗಾಗಿ ಈಗ ಈ ಒಂದು ಏಜೆನ್ಸಿ ವ್ಯವಹಾರಕ್ಕೆ ಸ್ಥಿರ ಬೇಡಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 60% ಬೆಳವಣಿಗೆಗೆ ಇದು ಉದ್ಯೋಗ ಸೂಚಿಸುವುದರೊಂದಿಗೆ ಸ್ಥಿರ ಆದಾಯವನ್ನು ಕೂಡ ನೀಡುತ್ತಾ ಇದೆ.
ಡೀಲರ್ ಶಿಪ್ ನೀಡುವಂತಹ ಕಂಪನಿಗಳು
- ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL)
- ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL)
- ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)
ಈಗ ನಾವು ಈ ಮೇಲೆ ತಿಳಿದಿರುವ ಅಂತಹ ಈ ಒಂದು ಮೂರು ಕಂಪನಿಗಳಲ್ಲಿ ನಿಮಗೆ ಬೇಕಾದಂತ ಕಂಪನಿಗಳಿಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿ, ಡೀಲರ್ಶಿಪ್ ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಕನಿಷ್ಠ 10ನೇ ತರಗತಿಯನ್ನು ಪಾಸ್ ಆಗಿರಬೇಕು.
- ಹಾಗೆ ಅವರ ವಯಸ್ಸು 21 ರಿಂದ 60 ವರ್ಷದ ಒಳಗೆ ಇರಬೇಕು.
- ಅರ್ಜಿ ಸಲ್ಲಿಸುವ ಸಮಯದಲ್ಲಿ 10,000 ಹಣವನ್ನು ಠೇವಣಿ ಮಾಡಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸ್ಥಳೀಯ ನಿವಾಸ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನೀವು ಯಾವ ಕಂಪನಿಗಳ ಏಜೆನ್ಸಿಯನ್ನು ಪಡೆಯಲು ಬಯಸುತ್ತೀರೋ, ಆ ಒಂದು ಕಂಪನಿಗಳ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ಅದರಲ್ಲಿ ರೆಜಿಸ್ಟ್ರೇಷನ್ ಮಾಡಿಕೊಳ್ಳಿ.
- ಆನಂತರ ಅಲ್ಲಿರುವಂತ ಒಂದು ಫಾರ್ಮನಲ್ಲಿ ಈಗ ನೀವು ನಿಮಗೆ ವಿವರಗಳು ಸ್ಥಳದ ಮಾಹಿತಿ ಹೂಡಿಕೆ ಮಾಹಿತಿ ಮತ್ತು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
- ಆನಂತರ ಅದಕ್ಕೆ ತಗಲುವ ಅಂತ 10,000 ಆನ್ಲೈನ್ ಹಣವನ್ನು ಪಾವತಿ ಮಾಡಿ.
- ತದನಂತರ ನೀವು ಭರ್ತಿ ಮಾಡಿದ ಪ್ರತಿಯೊಂದು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 31 2026