Hasu Emme Shed Construction Subsidy Scheme:  ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ 57,000 ಸಬ್ಸಿಡಿ! ಈ ದಾಖಲೆಗಳಿದ್ದರೆ ಸಾಕು! ಇಲ್ಲಿದೆ ಮಾಹಿತಿ.

Hasu Emme Shed Construction Subsidy Scheme:  ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ 57,000 ಸಬ್ಸಿಡಿ! ಈ ದಾಖಲೆಗಳಿದ್ದರೆ ಸಾಕು! ಇಲ್ಲಿದೆ ಮಾಹಿತಿ.

ಈಗ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಒಂದು ಪ್ರಮುಖ ಜೀವನಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರೈತರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಈಗ ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ಸುರಕ್ಷತೆ ಮತ್ತು ಸ್ವಚ್ಛವಾದ ವಾತಾವರಣವನ್ನು ನೀಡಲು ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ರೀತಿಯ ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಬಿಡುಗಡೆ ಮಾಡಿದೆ.

Hasu Emme Shed Construction Subsidy Scheme

ಹಾಗೆಯೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾನುವಾರು ಶೆಡ್ ಗಳ ನಿರ್ಮಾಣಕ್ಕಾಗಿ ರೈತರು 57,000 ವರೆಗೆ ಆರ್ಥಿಕ ನೆರವನ್ನು ಈಗ ಪಡೆದುಕೊಳ್ಳಬಹುದು. ವೈಯಕ್ತಿಕ ಕಾಮಗಾರಿಗಳಿಗೆ ಸರ್ಕಾರದಿಂದ ಸಹಾಯಧನ ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನವನ್ನು ಪಡೆಯುವ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಶೆಡ್ ನಿರ್ಮಾಣ ಸಹಾಯಧನದ ಮಾಹಿತಿ

ಈಗ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಮುಖ ಗುರಿ ಈಗ ಈ ಒಂದು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ವಯಸ್ಕರ ಸದಸ್ಯರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ನೀಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಹಾಗೆ ಈ ಒಂದು ಯೋಜನೆ ಅಡಿಯಲ್ಲಿ ಈಗ ಸುಮಾರು 266 ಬಗೆಯ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಅವುಗಳಲ್ಲಿ ಈಗ ಶಾಲಾ ಆವರಣ, ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆ, ಕೆರೆ, ಮೈದಾನ, ಸಮುದಾಯ ಭವನ ಇನ್ನು ಹಲವಾರು ರೀತಿಯ ಯೋಜನೆಗಳನ್ನು ಇದು ಒಳಗೊಂಡಿದೆ. ಈಗ ನರೇಗಾ ಯೋಜನೆ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಮೂಲಕ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಆರ್ಥಿಕ ನೆರವು ನೀಡುತ್ತದೆ, ಇದರಲ್ಲಿ ಈಗ ದನ, ಎಮ್ಮೆ, ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆಗೆ ವೈಯಕ್ತಿಕ ಶೆಡ್ ನಿರ್ಮಾಣಕ್ಕೂ ಕೂಡ ಸಹಾಯಧನ ಪಡೆಯಬಹುದು.

ಸಹಾಯಧನದ ಮೊತ್ತ ಎಷ್ಟು?

ಈಗ ಹಸು ಮತ್ತು ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ ಕೂಡ 57,000 ಸಹಾಯಧನವನ್ನು ನೀಡಲಾಗುತ್ತದೆ. ಹಾಗೆ ಈ ಒಂದು ಮೊತ್ತದಲ್ಲಿ ಸುಮಾರು 10,556 ರೂಪಾಯಿ ಕೂಲಿಯ ರೂಪದಲ್ಲಿ ಮತ್ತು ಇನ್ನುಳಿದಂತಹ 46,644 ಸಾಮಗ್ರಿಗಳ ಸಹಾಯ ಧನವಾಗಿ ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಕೋರಿ, ಕೋಳಿ, ಹಂದಿ, ಶೆಡ್ ಗಳ ನಿರ್ಮಾಣಕ್ಕೂ ಸಹಾಯಧನ ಪಡೆಯಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾಬ್ ಕಾರ್ಡ್
  • ಭೂಮಿಯ ದಾಖಲಾತಿಗಳು
  • ಬ್ಯಾಂಕ್ ಖಾತೆ ವಿವರಣೆ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಮೊದಲಿಗೆ ಜಾಬ್ ಕಾರ್ಡ್ ಅನ್ನು ಹೊಂದಿರಬೇಕು ಇಲ್ಲದೆ ಇದ್ದರೆ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ. ಅರ್ಜಿಯನ್ನು ಸಲ್ಲಿಕೆ ಮಾಡಿ, ಜಾಬ್ ಕಾರ್ಡನ್ನು ಪಡೆದುಕೊಳ್ಳಬಹುದು.

ಆನಂತರ ಸ್ನೇಹಿತರು ನೀವು ಹಸುಗಳನ್ನು ಸಾಕುತ್ತಿದ್ದೀರಿ ಮತ್ತು ಅವುಗಳಿಗೆ ಶೆಡ್ ಅಗತ್ಯವಿದೆ ಎಂಬುದನ್ನು ದೃಢೀಕರಿಸಲು ಈಗ ನಿಮ್ಮ ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ, ದೃಢೀಕರಣ ಪತ್ರವನ್ನು ಪಡೆದುಕೊಳ್ಳಬೇಕು. ನಂತರ ನಾವು ಈ ಮೇಲೆ ತಿಳ್ಸಿರುವಂತ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.

Leave a Comment