PMFME Loan Scheme: ಊರಿನಲ್ಲಿ ಉದ್ಯಮ ಸ್ಥಾಪನೆ ಮಾಡಲು 15 ಲಕ್ಷ ಸಹಾಯಧನ! ರೈತರು, ಮಹಿಳೆಯರು, ಯುವಕರು ಅರ್ಜಿ ಸಲ್ಲಿಸಿ.

ಈಗ ಹಳ್ಳಿಯಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅವಕಾಶವನ್ನು ನೀಡಲು ಈಗ ಸರ್ಕಾರ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮ ಪದ್ಧತಿಗೊಳಿಸುವಿಕೆ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಎಲ್ಲರೂ ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

PMFME Loan Scheme

ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಒಂದು ಯೋಜನೆ ಅಡಿಯಲ್ಲಿ ಕಿರು ಆಹಾರ ಉತ್ಪನ್ನ ಉದ್ಯಮ ಸ್ಥಾಪನೆ ಮಾಡಲು ಈಗ ಗರಿಷ್ಠ 15 ಲಕ್ಷದವರೆಗೆ ಈಗ ನೀವು ಸಹಾಯಧನವನ್ನು ಪಡೆದುಕೊಳ್ಳಬಹುದು. ಆಸಕ್ತಿ ಇರುವಂತಹ ಪ್ರತಿಯೊಬ್ಬ ಮಹಿಳೆಯರು ರೈತರು ಯುವಕರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಯೋಜನೆಯ ಮಾಹಿತಿ

ಈ ಯೋಜನೆಯ ಪ್ರಯೋಜನ ಪಡೆದ ರೈತರು ಮಹಿಳೆಯರು ಹಾಗೂ ಯುವ ಉದ್ಯಮಿಗಳು ಹಾಗೂ ಅಷ್ಟೇ ಅಲ್ಲದೆ ಸಹಾಯ ಸಂಘಗಳು, ರೈತ ಉತ್ಪಾದಕ ಸಂಘಗಳು ಮತ್ತು ಖಾಸಗಿ ಸಂಸ್ಥೆಗಳು ಕೂಡ ಈಗ ತಮ್ಮ ಊರಿನಲ್ಲಿ ಆಹಾರ ಸಂಸ್ಕರಣ ಘಟಕಗಳನ್ನು ಪ್ರಾರಂಭ ಮಾಡಬಹುದು.

ಹಾಗೆ ಈಗ ಕಳೆದ ಐದು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 20,000 ಅರ್ಜಿ ಸಲ್ಲಿಕೆಯಾಗಿದ್ದು. ಈ ಒಂದು ಪೈಕಿ 6,698 ಅರ್ಜಿಗಳನ್ನು ಈಗಾಗಲೇ ಅನುಮೋದನೆ ಮಾಡಲಾಗಿದೆ. ಇದೀಗ ಮತ್ತೊಂದು ವರ್ಷ ಅವಧಿ ವಿಸ್ತರಣೆಯನ್ನು ಮಾಡಿದ್ದು ಸುಮಾರು 5000 ಅರ್ಜಿಗಳ ಗುರಿಯನ್ನು ಈಗ ನೀಡಲಾಗಿದೆ.

ಹಾಗೆ ಈಗಾಗಲೇ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಂಡು ರಾಜ್ಯಾದ್ಯಂತ 1700 ಸಿರಿಧಾನ್ಯ ಸಂಸ್ಕರಣ ಘಟಕಗಳು ಸ್ಥಾಪನೆಯಾಗಿವೆ. ಆನಂತರ 783 ಗಾನದ ಎಣ್ಣೆ ಘಟಕಗಳು 180 ಮಸಾಲೆ ಘಟಕಗಳು 380 ಬೆಲ್ಲದ ಘಟಕಗಳು ಈಗಾಗಲೇ ಪ್ರಾರಂಭವಾಗಿದೆ.

ಸಹಾಯಧನ ಎಷ್ಟು?

ಈಗ ಈ ಒಂದು ಯೋಜನೆಯಲ್ಲಿ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ 15 ಲಕ್ಷದವರೆಗೆ ಈ ಒಂದು ಯೋಜನೆಯ ಮೂಲಕ ಸಹಾಯಧನವನ್ನು ಪಡೆದುಕೊಳ್ಳಬಹುದು. ಇದರಲ್ಲಿ ಈಗ ನೀವು ಕೇಂದ್ರ ಸರ್ಕಾರದಿಂದ 6 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 9 ಲಕ್ಷ ಹಣವನ್ನು ಪಡೆದುಕೊಳ್ಳಬಹುದು.

ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಯಾವುದೇ ರೀತಿಯಾದಂತಹ ಶೈಕ್ಷಣಿಕ ಅರ್ಹತೆ ಅಗತ್ಯ ಇರುವುದಿಲ್ಲ. 18 ವರ್ಷ ಮೇಲ್ಪಟ್ಟಂತ ಪ್ರತಿಯೊಬ್ಬರೂ ಕೂಡ ಅರ್ಹರು ಆಗಿರುತ್ತಾರೆ. ಹಾಗೆ ಬ್ಯಾಂಕ್ ಸಾಲ ಪಡೆದವರು ಕೂಡ ಅರ್ಜಿ  ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ.

ಯಾವೆಲ್ಲ ಘಟಕಗಳಿಗೆ ಸಹಾಯಧನ

ಹಾಗೆ ಈ ಒಂದು ಯೋಜನೆಯಲ್ಲಿ ಅರ್ಜಿದಾರರಿಗೆ ನೆರವಾಗಲು ಈಗ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿಗಳು ಕೂಡ ನಡೆಯುತ್ತಿದೆ. ಹಾಗೆಯೇ ಎರಡು ದಿನಗಳ ಉಚಿತ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಅರ್ಜಿ ವಿಲೆವಾರಿ ಮಾಡಿದ ಪ್ರತಿಯೊಂದು ಪ್ರಕರಣಕ್ಕೆ 20,000 ಕಮಿಷನ್ ದೊರೆಯುತ್ತದೆ.

ಈಗ ಇಂಥ ಉದ್ಯೋಗ ಉತ್ಪನ್ನ ಯೋಜನೆಗಳು ಗ್ರಾಮೀಣ ಭಾರತದಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜನ ನೀಡಲು ಈಗ ಸರ್ಕಾರ ಇವುಗಳನ್ನು ಬಿಡುಗಡೆ ಮಾಡಿದೆ. ರೈತರು ಮಹಿಳೆಯರು ಯುವಕರು ತಮ್ಮ ಊರಿನಲ್ಲಿ ಉದ್ಯಮ ಅಭಿವೃದ್ಧಿ ಪಡಿಸಲು ಒಳ್ಳೆಯ ಅವಕಾಶ ಎಂದು ಹೇಳಬಹುದು.

Leave a Reply

Your email address will not be published. Required fields are marked *