Sukanya Smariddi Scheme: ಈ ಯೋಜನೆಯಲ್ಲಿ ನಿಮ್ಮ ಹೆಣ್ಣು ಮಗುವಿಗೆ 70 ಲಕ್ಷ ಹಣ! ಈಗಲೇ ಯೋಜನೆಯ ಮಾಹಿತಿ ಪಡೆಯಿರಿ.
ಈಗ ಹೆಣ್ಣು ಮಕ್ಕಳ ಶಿಕ್ಷಣ ಮದುವೆ ಮತ್ತು ಆರ್ಥಿಕ ಭದ್ರತೆಗಳಿಗಾಗಿ ಈಗ ಉಳಿತಾಯ ಮಾಡುವುದು ಪೋಷಕರಿಗೆ ಒಂದು ಪ್ರಮುಖ ಜವಾಬ್ದಾರಿ ಆಗಿರುತ್ತದೆ. ಈ ಒಂದು ಜವಾಬ್ದಾರಿಯನ್ನು ಸುಗಮಗೊಳಿಸಲು ಭಾರತ ಸರ್ಕಾರವು 2015ರಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಉಪಕ್ರಮದ ಅಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಸಣ್ಣ ಉಳಿತಾಯ ಯೋಜನೆಯ ಜಾರಿಗೆ ಮಾಡಿದ್ದು.

ಈಗ ಈ ಒಂದು ಯೋಜನೆಯು 8.2% ಬಡ್ಡಿ ದರದೊಂದಿಗೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆಗಳನ್ನು ಈಗ ಒದಗಿಸುತ್ತ ಇದೆ. ಇದು ಈಗ ಹೆಣ್ಣು ಮಕ್ಕಳ ಭವಿಷ್ಯದ ಅಗತ್ಯಗಳಿಗೆ ಈಗ ಆರ್ಥಿಕ ಬೆಂಬಲವನ್ನು ನೀಡಲು ಮುಂದಾಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಮಾಹಿತಿ
ಈಗ ಸುಕನ್ಯ ಸಮೃದ್ಧಿ ಯೋಜನೆಯು ಪೋಷಕರಿಗೆ ತಮ್ಮ ಹೆಣ್ಣು ಮಗುವಿನ ದೀರ್ಘಕಾಲಿನ ಆರ್ಥಿಕ ಭದ್ರತೆಗಳಿಗಾಗಿ ಒಂದು ಸುರಕ್ಷಿತ ವೇದಿಕೆಯನ್ನು ನೀಡುತ್ತದೆ. ಈ ಒಂದು ಯೋಜನೆಯ ವೈಶಿಷ್ಟತೆಗಳು ಇಲ್ಲಿವೆ.
- ಈಗ 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಖಾತೆಯನ್ನು ತೆರೆಯಬಹುದಾಗಿರುತ್ತದೆ.
- ಆನಂತರ ವಾರ್ಷಿಕ ಕನಿಷ್ಠ 250 ಠೇವಣಿಯನ್ನು ಮಾಡಬೇಕು.
- ಹಾಗೆ ಗರಿಷ್ಟ ವಾರ್ಷಿಕವಾಗಿ 1.5 ಲಕ್ಷದವರೆಗೆ ಠೇವಣಿ ಮಾಡಬಹುದು.
- ಆ ಒಂದು ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ಠೇವಣಿಯನ್ನು ಮಾಡಬಹುದು. ಹಾಗೆ ಆ ಒಂದು ಖಾತೆಗೆ 21 ವರ್ಷಗಳ ನಂತರ ಮುಕ್ತಾಯವಾಗುತ್ತದೆ.
- ಹಾಗೆಯೇ ಈ ಒಂದು ಬಡ್ಡಿ ದರವು 8.2% ಅನ್ನು ತ್ರೈಮಾಸಿಕದಲ್ಲಿ ನೀಡಲಾಗುತ್ತದೆ.
- ಈಗ ಈ ಒಂದು ಯೋಜನೆಗೆ ಸರ್ಕಾರದ ಬೆಂಬಲದಿಂದ ಈ ಒಂದು ಯೋಜನೆಯು ಸಂಪೂರ್ಣ ಸುರಕ್ಷಿತವಾಗಿರುತ್ತದೆ.
ಯೋಜನೆಯ ಮಿತಿಗಳು ಏನು?
- ಈಗ ಒಬ್ಬ ಹೆಣ್ಣು ಮಗುವಿಗೆ ಕೇವಲ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿರುತ್ತದೆ.
- ಹಾಗೆ ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಹೆಣ್ಣು ಮಕ್ಕಳಿಗೆ ಎರಡು ಖಾತೆಗಳನ್ನು ತೆರೆಯಲಾಗುತ್ತದೆ.
- ಹಾಗೆ ಅವಳಿ ಅಥವಾ ತ್ರಿವಳಿಗಳ ಸಂದರ್ಭದಲ್ಲಿ ಷರತ್ತುಗಳಿಗೆ ಒಳಪಟ್ಟು ಎರಡಕ್ಕಿಂತ ಹೆಚ್ಚು ಖಾತೆಯನ್ನು ಈಗ ನೀವು ತೆರೆಯಬಹುದಾಗಿದೆ.
- ಹಾಗೆ ಖಾತೆಯನ್ನು ಸಕ್ರಿಯವಾಗಿಡಲಿ ಈಗ ಕನಿಷ್ಠ 250 ರೂಪಾಯಿ ವಾರ್ಷಿಕ ಠೇವಣಿಯನ್ನು ಮಾಡಬೇಕಾಗುತ್ತದೆ..
ಹೂಡಿಕೆಯ ಲೆಕ್ಕಾಚಾರ
ಈಗ ಈ ಒಂದು ಸುಕನ್ಯಾ ಸಮೃದ್ಧಿ ಯೋಜನೆಯ ಚಕ್ರ ಬಡ್ಡಿಯೊಂದಿಗೆ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ. ಹಾಗೆ ಇದರಿಂದ ದೀರ್ಘಕಾಲಿನ ಉಳಿತಾಯವು ಗಣನೀಯವಾಗಿ ಬೆಳೆಯುತ್ತಾ ಇದೆ.
ಈಗ ಉದಾಹರಣೆಗೆ ಒಂದು ವರ್ಷದ ಹೆಣ್ಣು ಮಗುವಿಗೆ ಖಾತೆಯನ್ನು ತೆರೆದರೆ 15 ವರ್ಷಗಳ ವರೆಗೆ ಪ್ರತಿ ವರ್ಷ 1.5 ಲಕ್ಷ ಹೂಡಿಕೆ ಮಾಡಿದರೆ 8.2% ವಾರ್ಷಿಕ ಬಡ್ಡಿಯ ಬಡ್ಡಿ ದರದೊಂದಿಗೆ 21 ವರ್ಷಗಳ ನಂತರ ಸುಮಾರು 70 ಲಕ್ಷದವರೆಗೆ ನೀವು ಮೊತ್ತವನ್ನು ಪಡೆಯಬಹುದಾಗಿದೆ.
ಈಗ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಈ ಒಂದು ಯೋಜನೆಯ ಮೇಲೆ ಈಗ ಹೂಡಿಕೆಯನ್ನು ಮಾಡುವುದು ಉತ್ತಮ. ಈಗ ನಿಮ್ಮ ಮನೆಯಲ್ಲಿ ಏನಾದರೂ ಹೆಣ್ಣು ಮಗಳು ಇದ್ದರೆ ನೀವು ಕೂಡ ಈ ಒಂದು ಯೋಜನೆ ಮೇಲೆ ಹೂಡಿಕೆಯನ್ನು ಮಾಡಿ. ಈ ಕೂಡಲೇ ನೀವು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆಯಬಹುದು.