Free Nati Kolimari Distibuation Scheme: ಗ್ರಾಮೀಣ ಮಹಿಳೆಯರಿಗೆ ಈಗ ಉಚಿತ ನಾಟಿ ಕೋಳಿ ಮರಿ ವಿತರಣೆಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ಗ್ರಾಮೀಣ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ಈಗ ಸರ್ಕಾರವು ಸಂಪೂರ್ಣವಾಗಿ ಉಚಿತವಾಗಿ ವಿತರಣೆ ಮಾಡುತ್ತಾ ಇದೆ. ಈಗ ಈ ಒಂದು ಸೌಲಭ್ಯಕ್ಕೆ ಯಾರೆಲ್ಲಾ ಅರ್ಹರಿದ್ದಾರೆ ಮತ್ತು ಉಚಿತ ಕೋಳಿ ಮರಿಯನ್ನು ಪಡೆಯುವುದು ಹೇಗೆ ಹಾಗೂ ಪಶುಪಾಲನೆ ಇಲಾಖೆ ಅಧಿಕಾರಿಗಳ ಬಗ್ಗೆ ಮಾಹಿತಿ ಎಲ್ಲಾ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇರುತ್ತದೆ.

ಹಾಗೆಯೇ ಮುಖ್ಯಮಂತ್ರಿ ಅಮೃತ್ ಜೀವನ್ ಯೋಜನೆ, ಪಶು ಭಾಗ್ಯ ಯೋಜನೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಲ್ಲಿ ಸಬ್ಜಿಡಿಯಲ್ಲಿ ಈಗ ಹಸು, ಕುರಿ, ಮೇಕೆಗಳನ್ನು ವಿತರಿಸುವ ಮಾದರಿಯಲ್ಲಿ ಈಗ ಸಂಪೂರ್ಣ ಉಚಿತವಾಗಿ ಕೋಳಿ ಮರಿ ವಿತರಣೆ ಯೋಜನೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈಗ ನಮ್ಮ ರಾಜ್ಯದ ಅನೇಕ ಗ್ರಾಮದ ಸಾವಿರಾರು ಬಡ ಮಹಿಳೆಯರು ಈ ಒಂದು ಯೋಜನೆ ಲಾಭವನ್ನು ಈಗ ಪಡೆದುಕೊಳ್ಳುತ್ತಾ ಇದ್ದಾರೆ.
ಹಾಗೆ ಈಗ ಕುಕ್ಕುಟೋದ್ಯಮವನ್ನು ಪ್ರೋತ್ಸಾಹಿಸಲು ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಲು ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಲಾಗಿದೆ. ಇದೀಗ ಪಶು ಸಂಗೋಪನೆ ಇಲಾಖೆಯಿಂದ ವಿವಿಧ ಜಿಲ್ಲೆಗಳಿಂದ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ.
ಪ್ರತಿ ಮಹಿಳೆಗೆ 20 ನಾಟಿ ಕೋಳಿ ಮರಿ ವಿತರಣೆ
ಈಗ ರಾಜ್ಯದ ಪ್ರತಿ ತಾಲೂಕುಗಳಿಗೆ ಗುರಿ ನಿಗದಿಪಡಿಸಲಾಗಿದೆ. ತಲಾ ಒಬ್ಬೋಬ ಫಲಾನುಭವಿಗಳಿಗೆ ಈಗ 20 ಕೋಳಿ ಮರಿಗಳನ್ನು ನೀಡುವಂತಹ ಯೋಜನೆಯನ್ನು ಈಗ ರೂಪಾಂತರ ಮಾಡಲಾಗಿದೆ. ಪ್ರತಿಯೊಬ್ಬ ಫಲಾನುಭವಿಗಳಿಗೆ 5 ವಾರದ ನಾಟಿ ಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತದೆ.
ಹಾಗೆ ಬಡತನ ರೇಖೆಗಿಂತ ಕೆಳಗಿರುವಂತಹ ಗ್ರಾಮೀಣ ಭಾಗದ ರೈತರು ಮಹಿಳೆಯರು ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಮತ್ತು ಪ್ರಾರ್ಥಮಿಕ ಕೋಳಿ ಸಹಕಾರ ಸಂಘಗಳ ಇರುವಂತ ಮಹಿಳಾ ಸದಸ್ಯರು ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಈ ಕೋಳಿ ಮರಿಗಳನ್ನು ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಕುಕಟ ಕ್ಷೇತ್ರದಲ್ಲಿ ಬೆಂಗಳೂರಿನ ಹೆಸರಘಟ್ಟದ ಕೇಂದ್ರೀಯ ಕುಕಟ ಅಭಿವೃದ್ಧಿ ಸಂಸ್ಥೆ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಕೋಳಿ ಮರಿಗಳನ್ನು ಉತ್ಪಾದನೆ ಮಾಡಲಾಗುತ್ತದೆ.
ಈ ಜಿಲ್ಲೆಯಲ್ಲಿ ಅರ್ಜಿಗಳು ಪ್ರಾರಂಭ
ಈಗ ಹಾವೇರಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ದೇಶಿ ದೇಶಿ ಕೋಳಿ ಮರಿಗಳನ್ನು ವಿತರಣೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಹಾವೇರಿ ತಾಲೂಕಿನಲ್ಲಿ ಒಟ್ಟು 99 ಫಲಾನುಭವಿಗಳ ಗುರಿ ಹೊಂದಿದ್ದು. ಈಗ ಮೀಸಲಾತಿಯ ಅನ್ವಯವಾಗಿ ಆಯ್ಕೆಯನ್ನು ಮಾಡಲಾಗುವುದು ಎಂದು ಈಗ ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈಗ ನವೆಂಬರ್ 10 ಸಂಜೆ 5:00 ಒಳಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಯ ತಾಲೂಕುಗಳು ಉಚಿತ ನಾಟಿ ಕೋಳಿ ಮರಿ ವಿತರಣೆ ಕಾರ್ಯ ಪ್ರಾರಂಭವಾಗಿದ್ದು. ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಲು ಈಗ ಪಶು ಸಂಗೋಪನೆ ಇಲಾಖೆಯ ಜಿಲ್ಲಾವಾರು ಉಪನಿರ್ದೇಶಕರ ಸಂಪರ್ಕ ಮಾಡಿಕೊಂಡು ನೀವು ಕೂಡ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.