Dipika Scholarship For Girls Students: ದೀಪಿಕಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ರೂ.30,000 ಹಣ.

Dipika Scholarship For Girls Students: ದೀಪಿಕಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ರೂ.30,000 ಹಣ.

ಈಗ ಕರ್ನಾಟಕ ಸರ್ಕಾರದ ಮಹಿಳೆಯರ ಶಿಕ್ಷಣಕ್ಕೆ ಒತ್ತು  ನೀಡುವಂತಹ ಸಲುವಾಗಿ ಈಗ ದೀಪಿಕಾ ವಿದ್ಯಾರ್ಥಿ ವೇತನವನ್ನು ಈಗ ಬಿಡುಗಡೆ ಮಾಡಿದೆ. ಈ ಒಂದು ವಿದ್ಯಾರ್ಥಿ ವೇತನ ಈಗ  ಅಜೀಮ್ ಪ್ರೇಮ್ ಜೀ ಫೌಂಡೇಶನ್ ನೊಂದಿಗೆ ಕೂಡಿಕೊಂಡು ಈ ಒಂದು ಯೋಜನೆಯಿಂದ ಈಗ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿಯರಿಗೆ ಉನ್ನತ ಶಿಕ್ಷಣದ ಕನಸುಗಳನ್ನು ನನಸು ಮಾಡಿಕೊಳ್ಳಲು 30000 ವರೆಗೆ ವಾರ್ಷಿಕ ವೇತನವನ್ನು ನೀಡಲಾಗುತ್ತದೆ.

Dipika Scholarship For Girls Students

ಅದೇ ರೀತಿಯಾಗಿ ಈ ಒಂದು ಯೋಜನೆಯು ಈಗ ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಇದು ಒಂದು ಪ್ರಮುಖ ಹೆಜ್ಜೆ ಆಗಿದೆ ಎಂದು ಹೇಳಿದರೆ ತಪ್ಪಾಗದು.

ಈ ಯೋಜನೆ ಉದ್ದೇಶ ಏನು?

ಈಗ ಈ ಒಂದು ದೀಪಿಕಾ ವಿದ್ಯಾರ್ಥಿ ವೇತನದ ಯೋಜನೆಯು ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿನಿಯರಿಗೆ ಈಗ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಗುರಿಯನ್ನು ಈಗ ಈ ಒಂದು ವಿದ್ಯಾರ್ಥಿ ವೇತನ ಹೊಂದಿದೆ. ಈಗ ಸೆಪ್ಟೆಂಬರ್ 19 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಒಂದು ಯೋಜನೆಯನ್ನು ಈಗ ಉದ್ಘಾಟನೆ ಮಾಡಿದ್ದಾರೆ.

ಹಾಗೆ ಈ ಒಂದು ಕಾರ್ಯಕ್ರಮ ಸುಮಾರು 32,000 ವಿದ್ಯಾರ್ಥಿನಿಯರಿಗೆ ಶಿಕ್ಷಣದಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ ಎಂದು ಈಗ ಸರ್ಕಾರದ ಅಧಿಕಾರಿಗಳು ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ ಆರ್ಥಿಕ ಕಷ್ಟಗಳಿಂದ ಶಿಕ್ಷಣದಲ್ಲಿ  ವಂಚಿತರಾಗಿರುವ ಅಂತ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೆ ಬೆಂಬಲವಾಗಿ ನಿಲ್ಲುವಂತಹ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ.

ಯಾರೆಲ್ಲಾ ಅರ್ಹರು?

  • ಈಗ ಈ ಒಂದು ಯೋಜನೆಗ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಆನಂತರ ಸರ್ಕಾರಿ ಶಾಲೆಗಳಲ್ಲಿ SSLC ಮತ್ತು PUC  ಪರೀಕ್ಷೆಯಲ್ಲಿ ಕನಿಷ್ಠ 60%  ಅಂಕಗಳೊಂದಿಗೆ ಪಾಸಾಗಿರಬೇಕು.
  • ಆನಂತರ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಹಾಗೆ ಈ ಒಂದು ವಿದ್ಯಾರ್ಥಿ ವೇತನ ಪದವಿ ಅಥವಾ ಡಿಪ್ಲೋಮಾ ಕೋರ್ಸ್ಗೆ ಮಾತ್ರ ಅನ್ವಯವಾಗುತ್ತದೆ.
  • ಹಾಗೆ ಈಗ ಶೈಕ್ಷಣಿಕ ವರ್ಷದಲ್ಲಿ ಸಾಮಾನ್ಯ ಪದವಿ ಅಥವಾ ವೃತ್ತಿಪರ ಪದವಿ ಕೋರ್ಸುಗಳಿಗೆ ಅವರು ಮೊದಲ ವರ್ಷಕ್ಕೆ ದಾಖಲೆ ಆಗಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ದಾಖಲೆಗಳು
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಈಗ ನೀವು ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿಕೊಳ್ಳಿ.
  • Link : Apply Now 
  • ಆನಂತರ ನೀವು ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀವು ಅದರಲ್ಲಿ ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ.
  • ನಂತರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳನ್ನು ಅದರಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ಆನಂತರ ನೀವು ಭರ್ತಿ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ SUBMIT ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು  ಸಲ್ಲಿಕೆ ಮಾಡಬಹುದು.

Leave a Comment